ಬಂಟ್ವಾಳ: ಜ. 27ರಂದು ದಫ್ ಸ್ಪರ್ಧೆ, ಬ್ಯಾರಿ ಕವಿಗೋಷ್ಠಿ ಕಾರ್ಯಕ್ರಮ
Update: 2018-01-08 18:13 IST
ಬಂಟ್ವಾಳ, ಜ. 8: ದಫ್ ಎಸೋಸಿಯೇಶನ್, ದ.ಕ. ಮತ್ತು ಉಡುಪಿ ಜಿಲ್ಲೆ, ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ, ಯೂತ್ ಫ್ರೆಂಡ್ಸ್ ಗುಡ್ಡೆಅಂಗಡಿ ಹಾಗೂ ಕರಾವಳಿ ಟೈಮ್ಸ್ ಪತ್ರಿಕಾ ಬಳಗ ಇವುಗಳ ಸಂಯುಕ್ತ ಆಶ್ರಯದಲ್ಲಿ ದಫ್ ಸ್ಪರ್ಧೆ ಹಾಗೂ ಬ್ಯಾರಿ ಕವಿಗೋಷ್ಠಿ ಕಾರ್ಯಕ್ರಮವು ಜ. 27ರಂದು ಸಂಜೆ 4ಕ್ಕೆ ಪಾಣೆಮಂಗಳೂರು-ಆಲಡ್ಕ ಮೈದಾನದ ಮರ್‌ಹೂಂ ಕೆ.ಎಂ. ಮಾಸ್ಟರ್ ವೇದಿಕೆಯಲ್ಲಿ ನಡೆಯಲಿದೆ.
ದಫ್ ಸ್ಪರ್ಧಾ ವಿಜೇತ ತಂಡಗಳಿಗೆ ಪ್ರಥಮ 7 ಸಾವಿರ ರೂ., ದ್ವಿತೀಯ 5 ಸಾವಿರ ರೂ., ತೃತೀಯ 3 ಸಾವಿರ ರೂ. ಹಾಗೂ ಸ್ಮರಣಿಕೆ ನೀಡಲಾಗುವುದು.
ಅಲ್ಲದೆ ಭಾಗವಹಿಸಿದ ಎಲ್ಲ ತಂಡಗಳಿಗೂ ಪ್ರೋತ್ಸಾಹಕ ನಗದು ಬಹುಮಾನ ನೀಡಿ ಪುರಸ್ಕರಿಸಲಾಗುವುದು. ವಿವರಗಳಿಗೆ ಮೊಬೈಲ್ ಸಂಖ್ಯೆ 9611545686 ಅಥವಾ 9844976826ನ್ನು ಸಂಪರ್ಕಿಸಬಹುದು ಎಂದು ದಫ್ ಎಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಪಿ.ಎಂ. ಅಶ್ರಫ್ ಪಾಣೆಮಂಗಳೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.