ದ.ಕ. ಜಿಲ್ಲಾ ಕಾರಾಗೃಹದಲ್ಲಿ ಹೊಡೆದಾಟ: ಜೈಲರ್ ಸೇರಿ ಮೂವರು ಆಸ್ಪತ್ರೆಗೆ
Update: 2018-01-08 18:54 IST
ಮಂಗಳೂರು, ಜ.8: ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ನಡುವೆ ಹೊಡೆದಾಟ ನಡೆದ ಘಟನೆ ಸೋಮವಾರ ಸಂಜೆ ನಡೆದಿದೆ.
ಹೊಡೆದಾಟದಲ್ಲಿ ಇಬ್ಬರು ಕೈದಿಗಳು ಗಾಯಗೊಂಡಿದ್ದು, ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಜಗಳವನ್ನು ಬಿಡಿಸಲು ಹೋಗಿದ್ದ ಜೈಲರ್‌ನ ಮೇಲೂ ಹಲ್ಲೆ ನಡೆದಿದ್ದು, ಅವರು ಕೂಡ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಸೋಮವಾರ ಸಂಜೆ ಹೊರಗಿನವರು ಭೇಟಿ ನೀಡುವ ಸಮಯದಲ್ಲಿ ಓರ್ವ ಕೈದಿ ಇನ್ನೋರ್ವನನ್ನು ಗುರಾಯಿಸಿ ನೋಡಿದ್ದ ಎಂದು ಕೈದಿಗಳು ಹೊಡೆದಾಡಿಕೊಂಡಿದ್ದಾರೆ. ಇವರನ್ನು ಬಿಡಿಸಲು ಹೋದ ಜೈಲು ಸಿಬ್ಬಂದಿ ಜೈಲರ್ ಎಸ್.ಬಿ.ಪಾಟೀಲ್ ಅವರ ಎಡಗೈಗೆ ಗಾಯವಾಗಿದ್ದು, ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.