‘ಮೇವು’ ಪರಿಣತರಾದ ಲಾಲು ಜೈಲಿನಲ್ಲಿ ಜಾನುವಾರು ಸಾಕಬಹುದು: ನ್ಯಾಯಮೂರ್ತಿ

Update: 2018-01-08 16:54 GMT

ಪಾಟ್ನಾ, ಜ. 7: ಲಾಲು ಪ್ರಸಾದ್ ತೆರೆದ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸಬೇಕು. ಅಲ್ಲಿ ಅವರು ಜಾನುವಾರು ಸಾಕಬಹುದು ಹಾಗೂ ಮೇವುಗಳ ಬಗೆಗಿನ ಅವರ ಉತ್ತಮ ಜ್ಞಾನ ಬಳಸಬಹುದು ಎಂದು ವಾರಾಂತ್ಯದಲ್ಲಿ ಮೇವು ಹಗರಣದ 16 ದೋಷಿಗಳಿಗೆ ಶಿಕ್ಷೆ ವಿಧಿಸಿದ ನ್ಯಾಯಮೂರ್ತಿಗಳು ಸಲಹೆ ನೀಡಿದರು.

 ಆರೋಗ್ಯ ಹಾಗೂ ವೃದ್ಧಾಪ್ಯದ ನೆಲೆಯಲ್ಲಿ ತಮಗೆ ಶಿಕ್ಷೆ ಕಡಿತಗೊಳಿಸಬೇಕು ಎಂದು ಕೋರಿ ದೋಷಿಗಳು ಮನವಿ ಮಾಡಿದ ಬಳಿಕ ಸಿಬಿಐ ನ್ಯಾಯಾಲಯದ ನ್ಯಾಯಮೂರ್ತಿ ಶಿವ ಪಾಲ್ ಸಿಂಗ್ ಈ ಸಲಹೆ ನೀಡಿದ್ದಾರೆ.

  ಜಾರ್ಖಂಡ್ ನ ಬಿರ್ಸಾ ಮುಂಡಾ ಕೇಂದ್ರ ಕಾರಾಗೃಹದಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆ ಉಲ್ಲೇಖಿಸಿದ ಲಾಲು ಪ್ರಸಾದ್ ಅವರ ವಕೀಲ ಚಿತ್ತರಂಜನ್ ಸಿನ್ಹಾ, ಅನಾರೋಗ್ಯದ ದೃಷ್ಟಿಯಿಂದ ಲಾಲು ಪ್ರಸಾದ್ ಅವರಿಗೆ ನೀಡಿದ ಕಾರಾಗೃಹ ಶಿಕ್ಷೆ ಕಡಿತಗೊಳಿಸಬೇಕು. ಲಾಲು ಪ್ರಸಾದ್ ಅವರು ತೆರೆದ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಹಾಗೂ ಅವರಿಗೆ ಮೂತ್ರಪಿಂಡದ ಸಮಸ್ಯೆ ಇದೆ. ಸಕ್ಕರೆ ಖಾಯಿಲೆ ಹತೋಟಿಗೆ ಬರದೇ ಇದ್ದರೆ, ಅಂಗಗಳನ್ನು ಕತ್ತರಿಸಬೇಕಾಗಬಹುದು ಎಂದರು.

ಇನ್ನೋರ್ವ ದೋಷಿ ಕೂಡ ತನ್ನ ಕಾರಾಗೃಹ ಶಿಕ್ಷೆಯನ್ನು 6 ತಿಂಗಳಿಗೆ ಇಳಿಸುವುದರಿಂದ ತಾನು ಕುಟುಂಬದವರೊಂದಿಗೆ ವಾಸಿಸಬಹುದು ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದಾರೆ.ಅನಂತರ ನ್ಯಾಯಮೂರ್ತಿ ಲಾಲು ಪ್ರಸಾದ್ ಹಾಗೂ ಇತರ ದೋಷಿಗಳಿಗೆ ತೆರೆದ ಕಾರಾಗೃಹದ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News