×
Ad

75ನೆ ‘ಗೋಲ್ಡನ್ ಗ್ಲೋಬ್’ ಪ್ರಶಸ್ತಿ ಪ್ರದಾನ: ಓಪ್ರಾ ವಿನ್‌ಫ್ರೇಗೆ ‘ಸೆಸಿಲ್ ಬಿ. ಡಿಮಿಲ್ ಜೀವಮಾನ ಸಾಧನೆ ಪ್ರಶಸ್ತಿ’

Update: 2018-01-08 23:11 IST

ಬೆವರ್ಲಿ ಹಿಲ್ಸ್ (ಕ್ಯಾಲಿಫೋರ್ನಿಯ), ಜ. 8: 75ನೆ ‘ಗೋಲ್ಡನ್ ಗ್ಲೋಬ್’ ಪ್ರಶಸ್ತಿ ಪ್ರದಾನ ಸಮಾರಂಭ ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯದ ಬೆವರ್ಲಿ ಹಿಲ್ಸ್‌ನಲ್ಲಿರುವ ಬೆವರ್ಲಿ ಹಿಲ್ಟನ್ ಹೊಟೇಲ್‌ನಲ್ಲಿ ರವಿವಾರ ರಾತ್ರಿ ನಡೆಯಿತು.

ಟಾಕ್ ಶೋ ನಿರೂಪಕಿ ಸೇತ್ ಮೇಯರ್ಸ್ ಮೊದಲ ಬಾರಿಗೆ ಕಾರ್ಯಕ್ರಮ ನಿರೂಪಿಸಿದರು.

ಓಪ್ರಾ ವಿನ್‌ಫ್ರೇ ಅವರಿಗೆ ‘ಸೆಸಿಲ್ ಬಿ. ಡಿಮಿಲ್ ಜೀವಮಾನ ಸಾಧನೆ ಪ್ರಶಸ್ತಿ’ ನೀಡಲಾಯಿತು.

‘ತ್ರೀ ಬಿಲ್‌ಬೋರ್ಡ್ಸ್ ಔಟ್‌ಸೈಡ್ ಎಬ್ಬಿಂಗ್ ಶ್ರೇಷ್ಠ ಚಿತ್ರ (ಡ್ರಾಮ) ಪ್ರಶಸ್ತಿ ಪಡೆಯಿತು.

ಮ್ಯೂಸಿಕಲ್ ಅಥವಾ ಕಾಮಿಡಿ ವಿಭಾಗದ ಶ್ರೇಷ್ಠ ಚಿತ್ರ ಪ್ರಶಸ್ತಿಯನ್ನು ‘ಲೇಡಿ ಬರ್ಡ್’ ಪಡೆಯಿತು.

‘ದ ಹ್ಯಾಂಡ್‌ಮೇಡ್ಸ್ ಟೇಲ್’ ಶ್ರೇಷ್ಠ ನಾಟಕ ಸರಣಿ ಪ್ರಶಸ್ತಿ ಪಡೆದರೆ, ಶ್ರೇಷ್ಠ ಮ್ಯೂಸಿಕಲ್ ಅಥವಾ ಕಾಮಿಡಿ ಸರಣಿ ಪ್ರಶಶ್ತಿಯನ್ನು ‘ದ ಮಾರ್ವಲಸ್ ಮಿಸರ್ಸ್ ಮೈಸಲ್’ ಪಡೆಯಿತು.

ಅದೇ ವೇಳೆ, ಶ್ರೇಷ್ಠ ಮಿನಿಸೀರೀಸ್ ಅಥವಾ ಟೆಲಿವಿಶನ್ ಚಿತ್ರ ಪ್ರಶಸ್ತಿಯನ್ನು ‘ಬಿಗ್ ಲಿಟಲ್ ಲೈಸ್’ ಪಡೆದುಕೊಂಡಿತು.

ಪ್ರಶಸ್ತಿಯ ನಾಮನಿರ್ದೇಶನಗಳನ್ನು ಶರೋನ್ ಸ್ಟೋನ್, ಆ್ಯಲ್‌ಫ್ರೆ ವುಡರ್ಡ್, ಕ್ರಿಸ್ಟನ್ ಬೆಲ್ ಮತ್ತು ಗ್ಯಾರೆಟ್ ಹೆಡ್ಲಂಡ್ ಕಳೆದ ವರ್ಷದ ಡಿಸೆಂಬರ್ 11ರಂದು ಘೋಷಿಸಿದ್ದರು.

ಲೈಂಗಿಕ ಕಿರುಕುಳದ ವಿರುದ್ಧ ಕಪ್ಪು ಬಟ್ಟೆ ತೊಟ್ಟು ಪ್ರತಿಭಟನೆ

ಹಾಲಿವುಡ್‌ನ ಅತಿ ದೊಡ್ಡ ಲೈಂಗಿಕ ಕಿರುಕುಳ ಹಗರಣ ಬಯಲುಗೊಂಡ ಬಳಿಕ ನಡೆದ ಚಿತ್ರೋದ್ಯಮದ ಮೊದಲ ಪ್ರಮುಖ ಸಮಾರಂಭ ‘ಗೋಲ್ಡನ್ ಗ್ಲೋಬ್’ ಪ್ರಶಸ್ತಿ ಪ್ರದಾನವಾಗಿತ್ತು.

ಚಿತ್ರ ನಿರ್ಮಾಪಕ ಹಾರ್ವೆ ವೀನ್‌ಸ್ಟೀನ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬುದಾಗಿ ಹಲವಾರು ನಟಿಯರು 2017ರಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿದರು. ಈ ಹಿನ್ನೆಲೆಯಲ್ಲಿ, ಲೈಂಗಿಕ ಕಿರುಕುಳದ ವಿರುದ್ಧ ಹಾಲಿವುಡ್ ನಟಿಯರು ಸೆಟೆದು ನಿಂತರು.

ವ್ಯಾಪಕವಾಗಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ವಿರುದ್ಧ ಪ್ರತಿಭಟಿಸಲು ಭಾಗವಹಿಸಿದ ಎಲ್ಲ ನಟಿಯರು ಕಪ್ಪು ಬಟ್ಟೆ ತೊಟ್ಟು ಬಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News