ಉಡುಪಿ: ಯುವಕ ನಾಪತ್ತೆ
Update: 2018-01-09 20:33 IST
ಉಡುಪಿ, ಜ.9: ತಾಲೂಕಿನ ಆರೂರು ಗ್ರಾಮ ಕುಂಜಾಲಿನ ಹಂದಿಗುಳಿ ದುರ್ಗಾ ನಿಲಯದಲ್ಲಿ ವಾಸವಿರುವ ಉಮೇಶ್ ಠಾಕೂರು (39)ಎಂಬವರು ಕಳೆದ ನ.28ರಂದು ಮಣಿಪಾಲಕ್ಕೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವರು ಇದುವರೆಗೂ ಮನೆಗೆ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿದ್ದಾರೆ.
ಗೋಧಿ ಮೈಬಣ್ಣ, 5-6 ಅಡಿ ಎತ್ತರ ಹಾಗೂ ಕನ್ನಡ, ತುಳು, ಕೊಂಕಣಿ, ಹಿಂದಿ ಬಾಷೆ ಮಾತನಾಡುವ ಇವರು ಬಿಳಿ ಬಣ್ಣದ ಉದ್ದ ತೋಳಿನ ಶರ್ಟ್ ಮತ್ತು ಹಸಿರು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಇವರು ಪತ್ತೆಯಾದಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡುವಂತೆ ಬ್ರಹ್ಮಾವರ ಪೊಲೀಸ್ ಠಾಣಾ ಪ್ರಕಟನೆ ತಿಳಿಸಿದೆ.