×
Ad

ಜ.11-14: ಮಹಿಳಾ ಉದ್ಯಮಿಗಳ ‘ಪವರ್ ಪರ್ಬ’

Update: 2018-01-09 21:29 IST

ಉಡುಪಿ, ಜ.9: ಉಡುಪಿಯ ಪವರ್ ಪ್ಲಾಟ್‌ಫಾರಂ ಆಫ್ ವುಮೆನ್ ಎಂಟರ್‌ಪ್ರೆನರ್ಸ್ ರಿಜಿಸ್ಟರ್ಡ್‌ (ಪವರ್) ವತಿಯಿಂದ ‘ಪವರ್ ಪರ್ಬ’ವನ್ನು ಜ.11-14ರವರೆಗೆ ಉಡುಪಿ ಬೀಡಿನಗುಡ್ಡೆಯ ಮಹಾತ್ಮಗಾಂಧಿ ಬಯಲು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

ಪವರ್ ಪರ್ಬದಲ್ಲಿ ಉಡುಪಿ ಮೈಸೂರು, ಬೆಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ಗದಗ, ಮುಂಬಯಿ, ತಮಿಳುನಾಡು, ರಾಜಸ್ಥಾನಗಳ ಕರಕುಶಲ, ಆಭರಣ, ಗೃಹಾಲಂಕಾರ, ಸಿದ್ಧ ಉಡುಪು, ವಸ್ತ್ರ ವಿನ್ಯಾಸ, ಚಿತ್ರಕಲೆ ಮೊದಲಾದ ವೈವಿಧ್ಯಮಯ ಮಳಿಗೆಗಳಿದ್ದು, ಈಗಾಗಲೇ ಸಣ್ಣ ಮತ್ತು ಮಧ್ಯಮ ಉದ್ಯಮ ಗಳ ಒಟ್ಟು 170 ಮಳಿಗೆಗಳನ್ನು ಮಹಿಳಾ ಉದ್ಯಮಿಗಳು ಕಾಯ್ದಿರಿಸಿದ್ದಾರೆ ಎಂದು ಪವರ್ ಅಧ್ಯಕ್ಷೆ ಡಾ.ಗಾಯತ್ರಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಕಾರ್ಯಕ್ರಮದ ಪೂರ್ವಭಾವಿಯಾಗಿ ಜ.10ರಂದು ಸಂಜೆ 4:30ಕ್ಕೆ ಪವರ್ ಸದಸ್ಯರು ಹಾಗೂ ಮಹಿಳಾ ಉದ್ಯಮಿಗಳಿಂದ ಕಾರು ಮತ್ತು ಬೈಕ್ ರ್ಯಾಲಿಗೆ ಮಣಿಪಾಲ ರಜತಾದ್ರಿಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಚಾಲನೆ ನೀಡಲಿರುವರು. ಪವರ್ ಪರ್ಬವನ್ನು ಸಚಿವ ಪ್ರಮೋದ್ ಜ.11 ರಂದು ಸಂಜೆ 5:30ಕ್ಕೆ ಉದ್ಘಾಟಿಸಲಿರುವರು.

ಈ ಸಂದರ್ಭದಲ್ಲಿ ಕಳೆದ 13 ವರ್ಷಗಳಿಂದ ಪರಿಸರದಲ್ಲಿ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಯಲ್ಲಿ ತೊಡಗಿಸಿಕೊಂಡಿರುವ ಉಡುಪಿ ಪುತ್ತೂರಿನ ಸುಂದರಿ ಭಾರ್ಗವ್ ಅವರನ್ನು ಸನ್ಮಾನಿಸಲಾಗುವುದು. ಜ.13ರಂದು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭವು ಡಾ.ವೀಣಾ ಬನ್ನಂಜೆ ಅಧ್ಯಕ್ಷತೆಯಲ್ಲಿ ನಡೆಯ ಲಿದೆ. ಮೇಳದ ಅವಧಿಯಲ್ಲಿ ಸಾರ್ವಜನಿಕರಿಗೆ ಆರೋಗ್ಯ ಮಾಹಿತಿ ಕಾರ್ಯ ಕ್ರಮವನ್ನು ಆಯೋಜಿಸಲಾಗಿದೆ. 8 ರಿಂದ 14ರ ವಯೋಮಾನದ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಜ.13ರಂದು ಏರ್ಪಡಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿ ಪುಷ್ಪಾ ರಾವ್, ಸ್ಥಾಪಕಾ ಧ್ಯಕ್ಷೆ ರೇಣು ಜಯರಾಮ್, ಜೊತೆ ಕಾರ್ಯದರ್ಶಿ ರಶ್ಮಿ ವಿಜಯೇಂದ್ರ, ಸರಿತಾ ಸಂತೋಷ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News