ಜ.12-14: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಅಧ್ಯಕ್ಷರಾಗಿ ಶಿಕ್ಷಣ ತಜ್ಞ ಡಾ. ಎಚ್.ಶಾಂತರಾಮ್
ಉಡುಪಿ, ಜ.9: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಆಶ್ರಯದಲ್ಲಿ 12ನೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ‘ವರ್ಧಮಾನ-2018’ ಜ.12, 13 ಮತ್ತು 14ರಂದು ಕಂಬದಕೋಣೆಯ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದ ಪುಂಡಲೀಕ ಹಾಲಂಬಿ ಸಭಾಂಗಣದ ಮೊಗೇರಿ ಗೋಪಾಲಕೃಷ್ಣ ಅಡಿಗ ವೇದಿಕೆಯಲ್ಲಿ ನಡೆಯಲಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಸಾಪ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಹಿರಿಯ ಶಿಕ್ಷಣ ತಜ್ಞ ಡಾ.ಎಚ್. ಶಾಂತಾರಾಮ್ ಸಮ್ಮೇಳನದ ಅಧ್ಯಕ್ಷತೆ ವಹಿಸಲಿರುವರು. ಈ ವರ್ಷದ ಸಮ್ಮೇಳನದಲ್ಲಿ ಹೊಸ ರೀತಿಯ ಪ್ರಯೋಗವನ್ನು ಮಾಡಲಾಗಿದ್ದು, ಪ್ರತಿ ದಿನ ಸಮ್ಮೇಳನವು ಅಪರಾಹ್ನ 3ಗಂಟೆಗೆ ಪ್ರಾರಂಭವಾಗಿ ರಾತ್ರಿ 10ಗಂಟೆ ಸಮಾಪ್ತಿ ಗೊಳ್ಳಲಿದೆ ಎಂದರು.
ಜ.12ರಂದು ಅಪರಾಹ್ನ 3ಗಂಟೆಗೆ ನಾಯ್ಕನಕಟ್ಟೆ ದೇವಸ್ಥಾನದಿಂದ ಹೊರಡ ಲಿರುವ ಕನ್ನಡ ಭುವನೇಶ್ವರಿಯ ಮೆರವಣಿಗೆಗೆ ನಿವೃತ್ತ ಶಿಕ್ಷಕ ಎನ್.ರಮಾನಂದ ಭಟ್ ಚಾಲನೆ ನೀಡಲಿರುವರು. ಸಂಜೆ 4ಗಂಟೆಗೆ ಕನ್ನಡ ಅಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಪ್ರೊ.ಜಿ.ಸಿದ್ಧರಾಮಯ್ಯ ಸಮ್ಮೇಳನವನ್ನು ಉದ್ಘಾಟಿಸಲಿರುವರು. ಸಚಿವ ಪ್ರಮೋದ್ ಮಧ್ವರಾಜ್ ಸಾಂಸ್ಕೃತಿಕ ಕಾರ್ಯಕ್ರಮ, ಶಾಸಕ ಗೋಪಾಲ ಪೂಜಾರಿ ಪುಸ್ತಕ ಮಳಿಗೆ, ಜಿಪಂ ಅಧ್ಯಕ್ಷ ದಿನಕರ ಬಾಬು ವಸ್ತು ಪ್ರದರ್ಶನವನ್ನು ಉದ್ಘಾಟಿಸಲಿರುವರು.
ಈ ಸಂದರ್ಭದಲ್ಲಿ ಕವಿ ಅಡಿಗರ ಸ್ಮರಣಾರ್ಥ ವಿಶೇಷ ಪ್ರಶಸ್ತಿಯನ್ನು ಗಾಯಕ ಎಚ್.ಚಂದ್ರಶೇಖರ ಕೆದ್ಲಾಯರಿಗೆ ಪ್ರದಾನ ಮಾಡಲಾಗುವುದು. ಸಂಜೆ 6.30ಕ್ಕೆ ಕವಿ ಗೋಪಾಲಕೃಷ್ಣ ಅಡಿಗರ ಕುರಿತು ವಿಚಾರಗೋಷ್ಠಿ ನಡೆಯಲಿದೆ. 13ರಂದು ಸಂಜೆ 4ಗಂಟೆಗ ಕರಾವಳಿ ಜಿಲ್ಲೆಯ ತಲ್ಲಣಗಳು ವಿಷಯದ ಕುರಿತು ವಿಚಾರ ಗೋಷ್ಠಿ ಜರಗಲಿದೆ. ಸಂಜೆ 6ಗಂಟೆಗೆ ಕವಿಗೋಷ್ಠಿಯಲ್ಲಿ ಜಿಲ್ಲೆಯ 15 ಕವಿಗಳು ಕವನ ವಾಚಿಸಲಿರುವರು. 14ರಂದು ಸಂಜೆ 4ಗಂಟೆಗೆ ಸಮ್ಮೇಳಾನಾಧ್ಯಕ್ಷ ರೊಂದಿಗೆ ಸಂವಾದ ಮತ್ತು 4:30ಕ್ಕೆ ಬಹಿರಂಗ ಅಧಿವೇಶನ ನಡೆಯಲಿದೆ.
ಸಂಜೆ 4:45ಕ್ಕೆ ಸಮಾರೋಪ ಸಮಾರಂಭದಲ್ಲಿ ಎ.ಈಶ್ವರಯ್ಯ ಸಮಾರೋಪ ಭಾಷಣ ಮಾಡಲಿರುವರು. ಈ ಸಂದರ್ಭದಲ್ಲಿ ವಿಶೇಷ ಸಾಧಕರ ಸನ್ಮಾನ ನಡೆ ಯಲಿದೆ. ಮೂರು ದಿನಗಳ ಸಮ್ಮೇಳನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳು, ನಾಟಕ, ಚಲನಚಿತ್ರ ಪ್ರದರ್ಶನಗಳು ನಡೆಯಲಿವೆ. ಎಲ್ಲ ಶಿಕ್ಷಕರಿಗೆ ಅನ್ಯ ಕಾರ್ಯ ನಿಮಿತ್ತ ರಜಾ ಸೌಲಭ್ಯವನ್ನು ಜಿಲ್ಲಾ ವಿದ್ಯಾಂಗ ಇಲಾಖೆ ಮಂಜೂರು ಮಾಡಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗೌರವ ಕಾರ್ಯದರ್ಶಿಗಳಾದ ಸೂರಾಲು ನಾರಾ ಯಣ ಮಡಿ, ಸುಬ್ರಹ್ಮಣ್ಯ ಶೆಟ್ಟಿ, ಸಂಚಾಲಕ ವಿ.ರಂಗಪ್ಪಯ್ಯ ಹೊಳ್ಳ, ಕಾರ್ಕಳ ತಾಲೂಕು ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು.