×
Ad

ಕೊಲ್ಲೂರು ದೇವಸ್ಥಾನ ಸ್ಪಷ್ಟೀಕರಣ

Update: 2018-01-09 21:34 IST

ಕೊಲ್ಲೂರು, ಜ.9:ಬೈಂದೂರಿನಲ್ಲಿ ನಿನ್ನೆ ನಡೆದ ಸರಕಾರಿ ಕಾರ್ಯಕ್ರಮಕ್ಕೆ ದೇವಳದ ವತಿಯಿಂದ ಪ್ರಸಾದ ಊಟ ನೀಡಿದ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ಉಂಟಾಗಿರುವ ವಿವಾದಕ್ಕೆ ಕೊಲ್ಲೂರು ಮುಕಾಂಬಿಕಾ ದೇವಸ್ಥಾನದ ವತಿಯಿಂದ ಸ್ಪಷ್ಟೀಕರಣವನ್ನು ನೀಡಲಾಗಿದೆ.

ಇದೊಂದು ಸರಕಾರಿ ಕಾರ್ಯಕ್ರಮವಾಗಿದ್ದು, ಸರಕಾರಿ ಕಾರ್ಯಕ್ರಮಗಳಿಗೆ ಪ್ರಸಾದ ಊಟ ನೀಡಲು ಅವಕಾಶವಿದೆ. ಆದರೂ ಸಹ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಪ್ರಸಾದ ಊಟಕ್ಕೆ ತಗಲುವ ಸುಮಾರು ಒಂದು ಲಕ್ಷ ರೂ.ಮೊತ್ತವನ್ನು ದೇವಸ್ಥಾನಕ್ಕೆ ಹೊರೆಯಾಗದಂತೆ ಜ.6ರಂದೇ ಚೆಕ್ ಮೂಲಕ ಪಾವತಿಸಿದ್ದಾರೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News