ಸಿಎಂ ಕಾರ್ಯಕ್ರಮದ ಬ್ಯಾನರ್‌ಗೆ ಹಾನಿ: ದೂರು
Update: 2018-01-09 22:00 IST
ಕಾಪು, ಜ.9: ಕಾಪುವಿನಲ್ಲಿ ಜ.8ರಂದು ನಡೆದ ಮುಖ್ಯಮಂತ್ರಿಗಳ ಸಾಧನ ಸಮಾವೇಶ ಕಾರ್ಯಕ್ರಮಕ್ಕೆ ಸಂಬಂಧಿಸಿದ ಬ್ಯಾನರ್‌ಗಳನ್ನು ದುಷ್ಕರ್ಮಿಗಳು ಸುಟ್ಟು ಹಾಕಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಪ್ಪಲಂಗಡಿಯಿಂದ ಉಚ್ಚಿಲದವರೆಗೆ ಅಳವಡಿಸಿದ ಮುಖ್ಯಮಂತ್ರಿ ಕಾರ್ಯಕ್ರಮದ ಬ್ಯಾನರ್ಗಳನ್ನು ದುಷ್ಕರ್ಮಿಗಳು ಜ.7ರಂದು ರಾತ್ರಿ ಸುಟ್ಟು ಹಾಕಿರುವುದಾಗಿ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.