ವಿದ್ಯುತ್ ಆಘಾತಕ್ಕೆ ಬಲಿ
Update: 2018-01-09 22:02 IST
ಬ್ರಹ್ಮಾವರ, ಜ.9: ವಿದ್ಯುತ್ ಕಂಬಕ್ಕೆ ಹತ್ತಿದ ವ್ಯಕ್ತಿಯೊಬ್ಬರು ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಜ.9ರಂದು ಬೆಳಗ್ಗೆ 8ಗಂಟೆ ಸುಮಾರಿಗೆ ಉಪ್ಪೂರು ಗ್ರಾಮದ ಕೊಳಲಗಿರಿಯ ಗಿರಿ ಬಾರ್ ಸಮೀಪ ನಡೆದಿದೆ.
ಮೃತರನ್ನು ಹಾವಂಜೆ, ಮುಗ್ಗೇರಿ ರೋಡ್‌ನ ಗಣೇಶ್ (37) ಎಂದು ಗುರುತಿಸಲಾಗಿದೆ. ಇವರು ವಿದ್ಯುತ್ ಕಂಬಕ್ಕೆ ಹತ್ತಿ ಹೈಟೆನ್ಶನ್ ತಂತಿಯನ್ನು ಕೈಯಿಂದ ಹಿಡಿದ ಪರಿಣಾಮ ವಿದ್ಯುತ್ ಆಘಾತಕ್ಕೆ ಒಳಗಾಗಿ ಕಂಬದಿಂದ ಬಿದ್ದು ಮೃತಪಟ್ಟರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.