ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಲು ನಿರ್ಧರಿಸಿದ ಉನಾ ಸಂತ್ರಸ್ತ ಕುಟುಂಬ

Update: 2018-01-09 16:53 GMT

ಅಹ್ಮದಾಬಾದ್, ಜ. 9: ಗುಜರಾತ್‌ನ ಉನಾದಲ್ಲಿ ‘ಗೋರಕ್ಷಕ’ರಿಂದ ಥಳಿತಕ್ಕೊಳಗಾಗಿದ್ದ ದಲಿತ ಕುಟುಂಬ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಲು ನಿರ್ಧರಿಸಿದೆ. ಕಳೆದ ವರ್ಷ ಜುಲೈಯಲ್ಲಿ ದನದ ಚರ್ಮ ಸುಲಿದುದಕ್ಕಾಗಿ ಸಮಾಧಿಯಾಲಾ ಗ್ರಾಮದ ಏಳು ಮಂದಿ ದಲಿತರನ್ನು ಅರೆ ನಗ್ನವಾಗಿ ಮೆರವಣಿಗೆ ನಡೆಸಲಾಗಿತ್ತು. ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ದೇಶಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿತ್ತು.

ದಲಿತರ ಮೆರವಣಿಗೆ ನಡೆಸಿದ ಬಳಿಕ ಇವರಲ್ಲಿ ನಾಲ್ಕು ಮಂದಿ ದಲಿತರನ್ನು ಗೋರಕ್ಷಕರು ಊನಾ ಪಟ್ಟಣಕ್ಕೆ ಕೊಂಡೊಯ್ದು ವಾಹನಕ್ಕೆ ಕಟ್ಟಿ ಹಾಕಿ ಥಳಿಸಿದ್ದರು. ಈ ಘಟನೆಯ ಸಂತ್ರಸ್ತರಿಗೆ ರಾಜ್ಯ ಸರಕಾರ ಉದ್ಯೋಗ ಹಾಗೂ ಭೂಮಿ ನೀಡುವುದಾಗಿ ಭರವಸೆ ನೀಡಿತ್ತು. ಆದರೆ, ಭರವಸೆ ಈಡೇರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ದಲಿತ ಕುಟುಂಬ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಲು ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News