ಜ.12: ಮಂಜನಾಡಿ ಉಸ್ತಾದ್ ಉರೂಸ್
Update: 2018-01-09 23:06 IST
ಮಂಗಳೂರು, ಜ.9: ಶೈಖುನಾ ಸಿ.ಪಿ. ಮುಹಮ್ಮದ್ ಕುಂಞಿ ಮುಸ್ಲಿಯಾರ್ (ಮಂಜನಾಡಿ ಉಸ್ತಾದ್)ರ 6ನೆ ಉರೂಸ್ ಹಾಗೂ 51ನೆ ರಾತೀಬುಲ್ ಗೌಸಿಯತುಲ್ ಕಾರ್ಯಕ್ರಮವು ಜ.12ರಂದು ಮಗ್ರಿಬ್ ನಮಾಝ್ ಬಳಿಕ ಕಾಞಂಗಾಡ್‌ನ ಪಝಕಡಪುರಂನಲ್ಲಿ ನಡೆಯಲಿದೆ ಎಂದು ಕೆ.ಎಂ.ಕೆ.ಮಂಜನಾಡಿ ಹೇಳಿದರು.
ಮಂಗಳವಾರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಸೈಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ಅಲ್ ಬುಖಾರಿ ಬಾಯಾರ್‌ರ ನೇತೃತ್ವ ಹಾಗೂ ಅಲ್ ಮದೀನಾದ ಶಿಲ್ಪಿ ಶೈಖುನಾ ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾಡಾಚಿರ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಹ್ಮದ್ ಸಖಾಫಿಯ ನೇತೃತ್ವದಲ್ಲಿ ದರ್ಗಾ ಝಿಯಾರತ್ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಲ್ ಮದೀನಾದ ಮ್ಯಾನೇಜರ್ ಹಾಜಿ ಅಬ್ದುಲ್ ಖಾದರ್ ಸಖಾಫಿ, ಪ್ರಚಾರ ಸಮಿತಿಯ ಸಂಚಾಲಕ ಅಬೂಬಕರ್ ಮದನಿ ಪಡಿಕ್ಕಲ್, ಹಾಜಿ ಮುಹಮ್ಮದ್ ಕಂಡಿಕ ಉಪಸ್ಥಿತರಿದ್ದರು.