ಸಾರಾ ಅಬೂಬಕರ್ ಪ್ರಶಸ್ತಿಗೆ ಕೃತಿಗಳ ಆಹ್ವಾನ
Update: 2018-01-09 23:09 IST
ಮಂಗಳೂರು, ಜ.9: ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಹಿರಿಯ ಸದಸ್ಯೆ ಡಾ. ಸಾರಾ ಅಬೂಬಕರ್ ಕೊಡಮಾಡಿದ ರಾಜ್ಯಮಟ್ಟದ ‘ಸಾರಾ ಸಾಹಿತ್ಯ ಪ್ರಶಸ್ತಿ’ಗೆ 2015,2016, 2017ರಲ್ಲಿ ಪ್ರಕಟಗೊಂಡ ಕನ್ನಡ ಕಾದಂಬರಿಯ 3 ಪ್ರತಿಯನ್ನು ಆಹ್ವಾನಿಸಲಾಗಿದೆ.
ಪ್ರಶಸ್ತಿ ವಿಜೇತರಿಗೆ 5 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.ಆಸಕ್ತರು ಫೆ.5ರೊಳಗೆ ‘ಕರಾವಳಿ ಲೇಖಕಿಯರ-ವಾಚಕಿಯರ ಸಂಘ (ರಿ), ಸಾಹಿತ್ಯ ಸದನ, ಉರ್ವಸ್ಟೋರ್, ಅಶೋಕನಗರ, ಮಂಗಳೂರು-6 ಇಲ್ಲಿಗೆ ಕಳುಹಿಸಬಹುದು. ಮಾಹಿತಿಗೆ ಮೊ.ಸಂ: 9880079780ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.