ಏರ್ ಇಂಡಿಯಾದಲ್ಲಿ ಶೇ. 49 ವಿದೇಶಿ ನೇರ ಹೂಡಿಕೆಗೆ ಸಂಪುಟ ಅನುಮೋದನೆ

Update: 2018-01-10 15:48 GMT

ಹೊಸದಿಲ್ಲಿ, ಜ. 10: ವೈಮಾನಿಕ, ನಿರ್ಮಾಣ ಹಾಗೂ ಸಿಂಗಲ್ ಬ್ರಾಂಡ್ ರಿಟೈಲ್ ವಲಯದಾದ್ಯಂತ ಹೂಡಿಕೆ ನಿಯಮಗಳನ್ನು ಸರಳಗೊಳಿಸಲು ಭಾರತದ ವಿದೇಶಿ ನೇರ ಹೂಡಿಕೆ ನೀತಿಯ ಪ್ರಮುಖ ಬದಲಾವಣೆಗೆ ಸಂಪುಟ ಬುಧವಾರ ಅನುಮೋದನೆ ನೀಡಿದೆ.

 ಸಿಂಗಲ್ ಬ್ರಾಂಡ್ ರಿಟೈಲ್ ಟ್ರೇಡಿಂಗ್ ಹಾಗೂ ನಿರ್ಮಾಣ ಅಭಿವೃದ್ಧಿಗೆ ‘ಅಟೋಮ್ಯಾಟಿಕ್ ರೂಟ್’ (ಕಡಿಮೆ ನಿರ್ಬಂಧ) ಅಡಿಯಲ್ಲಿ ಶೇ. 100 ವಿದೇಶಿ ನೇರ ಹೂಡಿಕೆಗೆ ನರೇಂದ್ರ ಮೋದಿ ನೇತೃತ್ವದ ಸರಕಾರ ಅನುಮೋದನೆ ನೀಡಿದೆ. ಪ್ರಸ್ತುತ ಸಿಂಗಲ್ ಬ್ರಾಂಡ್ ರಿಟೈಲ್‌ನಲ್ಲಿ ‘ಅಟೋಮ್ಯಾಟಿಕ್ ರೂಟ್’ ನಲ್ಲಿ ಶೇ. 49ರಷ್ಟು ಮಾತ್ರ ವಿದೇಶಿ ನೇರ ಹೂಡಿಕೆಗೆ ಅವಕಾಶವಿದೆ.

 ಇದೇ ರೀತಿ ವಿದೇಶಿ ವೈಮಾನಿಕ ಸಂಸ್ಥೆಗಳು ಸರಕಾರಿ ಅನುಮೋದಿತ ವಿಧಾನದ ಮೂಲಕ ಏರ್ ಇಂಡಿಯಾದಲ್ಲಿ ಶೇ. 49 ಹೂಡಿಕೆ ಮಾಡಬಹುದು. ಹೆಚ್ಚುವರಿಯಾಗಿ ಪ್ರಾಥಮಿಕ ಮಾರುಕಟ್ಟೆ ಮೂಲಕ ಪವರ್ ಎಕ್ಸ್‌ಚೇಂಜ್‌ನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೂಡಿಕೆ ಮಾಡಬಹುದು. ವಿದೇಶಿ ನೇರ ಹೂಡಿಕೆ ನೀತಿಯಲ್ಲಿ ‘ವೈದ್ಯಕೀಯ ಸಾಧನ’ಗಳ ವ್ಯಾಖ್ಯಾನ ತಿದ್ದುಪಡಿ ಮಾಡಲಾಗಿದೆ ಎಂದು ಸರಕಾರದ ಹೇಳಿಕೆ ತಿಳಿಸಿದೆ.

 ಸರಕಾರ ತಿದ್ದುಪಡಿ ಮೂಲಕ ವಿದೇಶಿ ನೇರ ಹೂಡಿಕೆ ನೀತಿ ಸರಳಗೊಳಿಸಿದೆ ಹಾಗೂ ಉದಾರೀಕರಣಗೊಳಿಸಿದೆ. ವ್ಯವಹಾರ ಸುಗಮವಾಗಿ ನಡೆಯುವುದು ಹಾಗೂ ಭಾರತ ಜಾಗತಿಕ ಹೂಡಿಕೆಯ ಹಾಟ್‌ಸ್ಪಾಟ್ ಆಗುವುದು ಇದರ ಮುಖ್ಯ ಉದ್ದೇಶ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News