ಯೆನೆಪೋಯ ಮೆಡಿಕಲ್ ಕಾಲೇಜಿನಲ್ಲಿ ಲಿಂಫೋಸೈಟ್ ಕ್ರಾಸ್‌ಮ್ಯಾಚ್ ಕಿಡ್ನಿ ಕಸಿ ಚಿಕಿತ್ಸೆ
ಮಂಗಳೂರು, ಜ. 10: ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿ, ಮೂತ್ರಪಿಂಡ ಕಸಿ ಮಾಡುವಿಕೆ, ಕ್ರಾಸ್ ಮ್ಯಾಚ್ ಸೌಲಭ್ಯವನ್ನು ಪರಿಚಯಿಸುವ ಮೂಲಕ ಮತ್ತು ಕನಿಷ್ಠ ಆಕ್ರಮಣಕಾರಿ ರೊಬೊಟಿಕ್ ಮೂತ್ರಪಿಂಡ ಕಸಿ ಮಾಡುವ ಮೂಲಕ ಈ ಕ್ರಮದಲ್ಲಿ ಒಂದು ಮಹತ್ವದ ಹೆಜ್ಜೆ ಇಟ್ಟಿದೆ.
ಮೂತ್ರಪಿಂಡದ ಕಸಿಮಾಡುವಿಕೆಯ ಅವಿಭಾಜ್ಯ ಭಾಗವಾದ ಲಿಂಫೋಸೈಟ್ ಕ್ರಾಸ್ ಮ್ಯಾಚ್ ಮಾಡುವ ಮಂಗಳೂರಿನಲ್ಲಿ ಏಕೈಕ ಸೌಲಭ್ಯವಾಗಿದೆ. ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ರಾಜ್ಯದ ಗಡಿಯನ್ನು ಮೀರಿ, ಜಮ್ಮು ಮತ್ತು ಕಾಶ್ಮೀರದ ಬಡ ರೋಗಿಗಳಿಗೆ ಕಸಿ ಮಾಡಿದೆ. ಜಮ್ಮು ಮತ್ತು ಕಾಶ್ಮೀರದ ಈ ಬಡ ರೋಗಿಯು ಕೊನೆಯ ಹಂತದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ. ಅವನ ಹೆಂಡತಿ ತನ್ನ ಮೂತ್ರಪಿಂಡವನ್ನು ತನ್ನ ಗಂಡನಿಗೆ ದಾನ ಮಾಡಲು ಸಿದ್ಧರಾದರು. ಆದರೆ ಟ್ರಾನ್ಸ್‌ಪ್ಲಾಂಟ್‌ಗೆ ಪಾವತಿಸಲು ಅವರಲ್ಲಿ ಸಾಕಷ್ಟು ಹಣ ಇರಲಿಲ್ಲ. ಅವರು ಯೆನೆಪೊಯದ ವೈದ್ಯರನ್ನು ಸಂಪರ್ಕಿಸಿದರು. ವೈದ್ಯರು ಅವರ ಆರ್ಥಿಕ ಹಿನ್ನೆಲೆಯನ್ನು ಪರಿಗಣಿಸಿ ಸಹಾಯ ಮಾಡಲು ಒಪ್ಪಿಕೊಂಡರು.
ಆಸ್ಪತ್ರೆಯ ಆಡಳಿತ ಎಲ್ಲಾ ವೆಚ್ಚವನ್ನು ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡಿತು ಮತ್ತು ವೈದ್ಯರ ಶುಲ್ಕವನ್ನು ವಿನಾಯಿತಿ ಮಾಡಲಾಯಿತು. ಅವರು ಯಶಸ್ವಿಯಾಗಿ ಕಸಿಗೆ ಒಳಗಾಗಿದ್ದರು ಮತ್ತು ಶಸ್ತ್ರಚಿಕಿತ್ಸೆಯಾದ 10 ದಿನಗಳಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ಕಸಿ ಮಾಡುವಿಕೆಗೆ ವೆಚ್ಚ ಅಧಿಕವಾಗಿದೆ. ಆದರೆ ಯೆನೆಪೋಯಾದಲ್ಲಿ ವೆಚ್ಚ ಕಡಿಮೆ ಇರುವುದರಿಂದ ಬಹಳಷ್ಟು ಕಸಿಗಳು ನಡೆಯುತ್ತಿವೆ. ಕಳೆದ ಎರಡು ವರ್ಷಗಳಿಂದ ಯೆನೆಪೋಯದಲ್ಲಿ ಕಸಿ ಮಾಡಿದ ಸಂಖ್ಯೆಯು ಹೆಚ್ಚುತ್ತಿದೆ. ಮೂತ್ರಪಿಂಡದ ಕಸಿ ಮಾಡುವಿಕೆಯಿಂದಾಗಿ ವಿದೇಶದ ಜನರು ಕೂಡ ಈ ಸಾಮರ್ಥ್ಯವನ್ನು ಗುರುತಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಡಾ. ಮುಜೀಬುರ್ರಹ್ಮಾನ್, ಡಾ. ಅಲ್ತಾಫ್ ಖಾನ್, ಡಾ. ನಿಶ್ಚಿತ್ ಡಿಸೋಜಾ, ಡಾ. ಸಂತೋಷ್ ಪೈ ಡಾ. ಕಾರ್ತಿಕ್ ಮತ್ತು ಡಾ. ಗಣೇಶ್ ಕಾಮತ್ ಒಳಗೊಂಡ ನೆಪ್ರೊ ಯೂರಾಲಜಿ ವೈದ್ಯ ತಂಡ ಉತ್ತಮ ಕೆಲಸ ಮಾಡುತ್ತಿದೆ. ಮೂತ್ರಪಿಂಡದ ಕಸಿ ಅಗತ್ಯ ರೋಗಿಗಳು (ಟ್ರಾನ್ಸ್‌ಪ್ಲಾಂಟ್) ಸಂಯೋಜಕ ನೆಲ್ವಿನ್ ನೆಲ್ಸನ್‌ರನ್ನು 8123018855 ರಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.