ಕೊಂಕಣಿ ಸಾಹಿತ್ಯ ವಿಮರ್ಶೆಯ ಬಗ್ಗೆ ವಿಶೇಷ ಉಪನ್ಯಾಸ
Update: 2018-01-10 21:59 IST
ಮಂಗಳೂರು, ಜ. 10: ವಿಶ್ವವಿದ್ಯಾನಿಲಯದ ಘಟಕ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ಕೊಂಕಣಿ ವಿಭಾಗವು ಜನವರಿ ತಿಂಗಳ ಸರಣಿ ಉಪನ್ಯಾಸ ಕಾರ್ಯದ ಭಾಗವಾಗಿ ಜ.12ರಂದು ಸಂಜೆ 6:30ಕ್ಕೆ ಕೊಂಕಣಿ ಸಾಹಿತ್ಯ ವಿಮರ್ಶೆ ಎನ್ನುವ ವಿಷಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಂಗಳೂರಿನ ಕೊಂಕಣಿ ಭಾಷಾಮಂಡಳ ಕರ್ನಾಟಕ ಇದರ ಉಪಾಧ್ಯಕ್ಷ ಎಂ. ಆರ್. ಕಾಮತ್ ಆಗಮಿಸಲಿದ್ದಾರೆ.
ಅಧ್ಯಕ್ಷತೆಯನ್ನು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ಸುಭಾಷಿಣಿ ಶ್ರೀವತ್ಸ ವಹಿಸಿಕೊಳ್ಳಲಿದ್ದಾರೆ.ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರಿನ ಕೊಂಕಣಿ ಲೇಖಕ, ಪತ್ರಕರ್ತ, ವಿಮರ್ಶಕ ಎಚ್ಚೆಮ್ ಪೆರ್ನಾಳ್ ಅವರು ಉಪನ್ಯಾಸ ನೀಡಲಿದ್ದಾರೆ ಎಂದು ಸ್ನಾತಕೋತ್ತರ ಕೊಂಕಣಿ ವಿಭಾಗದ ಸಂಯೋಜಕ ಡಾ.ಅರವಿಂದ ಶ್ಯಾನಭಾಗ ತಿಳಿಸಿದ್ದಾರೆ.