×
Ad

ವಿದ್ಯಾರ್ಥಿನಿಯ ಫೋಟೋ ಕದ್ದು ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ: ಮೂವರ ವಿರುದ್ಧ ದೂರು ದಾಖಲು

Update: 2018-01-10 22:11 IST

ಮಂಗಳೂರು, ಜ. 10: ಎಸ್‌ಎಫ್‌ಐ ದ.ಕ. ಜಿಲ್ಲಾ ಕಾರ್ಯದರ್ಶಿ ಮಾಧುರಿ ಬೋಳಾರ್ ಅವರಿದ್ದ ಗ್ರೂಪ್ ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ದುರುಪಯೋಗ ಮಾಡಿದ ಘಟನೆಗೆ ಸಂಬಂಧಿಸಿ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಶೈಲೇಶ್ ಸಾಲ್ಯಾನ್, ಶ್ರೀ ಹರಿ ಮತ್ತು ದಾಕ್ಷಾಯಿಣಿ ಎಂಬವರ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಪೊಟೋವವನ್ನು ಶೇರ್ ಮಾಡಿದವರಲ್ಲಿ ಹಲವರಿದ್ದು, ಪ್ರಾಥಮಿಕ ಹಂತವಾಗಿ ಮೂವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಕಾರ್‌ಸ್ಟ್ರೀಟ್ ಪ್ರಥಮ ದರ್ಜೆ ಸರಕಾರಿ ಕಾಲೇಜಿನ ಎಂ.ಕಾಂ. ವಿದ್ಯಾರ್ಥಿನಿ, ಬೋಳಾರದ ಮುಳಿಹಿತ್ಲು ನಿವಾಸಿ ಮಾಧುರಿ ಬೋಳಾರ್ ಅವರು ಸಂಘಟನೆಯ ಕಾರ್ಯ ನಿರ್ಮಿತ್ತ ಸಹಪಾಠಿಗಳೊಂದಿಗೆ ಓಡಾಟ ನಡೆಸುವ ಸಂದರ್ಭದಲ್ಲಿ ತೆಗೆಯಲಾದ ಗ್ರೂಪ್ ಫೊಟೋವನ್ನು ಫೇಸ್‌ಬುಕ್‌ನಿಂದ ಕದ್ದು ವಾಟ್ಸ್‌ಆ್ಯಪ್‌ಗಳಲ್ಲಿ ಹರಿಯ ಬಿಟ್ಟು ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಮಾಧುರಿ ಬೋಳಾರ್ ಅವರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಅಲ್ಲದೆ, ಈ ಬಗ್ಗೆ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News