ಅಂತರ್ ವಿವಿ ಮಹಿಳೆಯರ ಹಾಕಿ ಪಂದ್ಯಾಟ: ಮಂಗಳೂರು ವಿವಿಗೆ ಚಿನ್ನದ ಪದಕ
Update: 2018-01-10 22:33 IST
ಮಂಗಳೂರು, ಜ. 10: ಅಣ್ಣಾಮಲೈ ವಿಶ್ವವಿದ್ಯಾನಿಲಯದಲ್ಲಿ ಜ.6ರಿಂದ 10ರವರೆಗೆ ನಡೆದ ಅಂತರ್ ವಿಶ್ವವಿದ್ಯಾನಿಲಯ ಮಹಿಳೆಯರ ಹಾಕಿ ಪಂದ್ಯಾಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಚನ್ನದ ಪದಕ ಗಳಿಸಿದೆ.
ಮಂಗಳೂರು ವಿವಿ ಕ್ವಾಟರ್ ಫೈನಲ್ ಪಂದ್ಯದಲ್ಲಿ ಮಧುರೈ ಕಾಮರಾಜ್ ವಿವಿ ತಂಡವನ್ನು 3-0 ಗೋಲುಗಳಿಂದ ಸೋಲಿಸಿ ಅಖಿಲ ಭಾರತ ಅಂತರ್ ವಿವಿ ಹಾಕಿ ಪಂದ್ಯಾಟಕ್ಕೆ ತೇರ್ಗಡೆಗೊಂಡಿತು. ಬಳಿಕ ನಡೆದ ಪಂದ್ಯದಲ್ಲಿ ಮೈಸೂರು ವಿವಿಯೊಂದಿಗೆ ಡ್ರಾ ಸಾಧಿಸಿತು. ಅಲ್ಲದೆ ಅಣ್ಣಾಮಲೈ ವಿವಿಯೊಂದಿಗೆ 7-1 ಗೋಲುಗಳಿಂದ ಜಯ ಸಾಧಿಸಿ ಚಿನ್ನದ ಪದಕ ಗೆದ್ದುಕೊಂಡಿತು.