×
Ad

ಭಾರತೀಯ ವಿದ್ಯಾರ್ಥಿಗಳ ಶೈಕ್ಷಣಿಕ ಆಸಕ್ತಿ ಬಗ್ಗೆ ನೋಬೆಲ್ ಪ್ರಶಸ್ತಿ ವಿಜೇತರ ಮೆಚ್ಚುಗೆ

Update: 2018-01-10 22:43 IST

ಮಂಗಳೂರು ವಲಯದ ನ್ಯೂ ಇನ್‌ಕ್ಯುಬೇಶನ್ ನೆಟ್‌ವರ್ಕ ಕೇಂದ್ರಕ್ಕೆ ಚಾಲನೆ

ಮಂಗಳೂರು, ಜ.10: ಭಾರತದ ವಿದ್ಯಾರ್ಥಿಗಳ ಶೈಕ್ಷಣಿಕ ಆಸಕ್ತಿ, ಕುತೂಹಲದ ಬಗ್ಗೆ ಮೆಚ್ಚುಗೆಯಾಗಿದೆ. ಈ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಹೊಸ ಸಾಧನಗಳ ಆವಿಷ್ಕಾರ ,ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತಾಗಲಿ ಎಂದು ವಿಜ್ಞಾನದಲ್ಲಿ 1968ರಲ್ಲಿ ನೊಬೆಲ್ ಪ್ರಶಸ್ತಿ ವಿಜೇತರಾದ ಆ್ಯಡಾ ಇ.ಯೋನಥ್ ತಿಳಿಸಿದ್ದಾರೆ.

ಅವರು ಸಹ್ಯಾದ್ರಿ ತಾಂತ್ರಿಕ ಮತ್ತು ಆಡಳಿತ ಮಹಾವಿದ್ಯಾಲಯದ ದಲ್ಲಿ ಐದುದಿನಗಳ ಕಾಲ ನಡೆದ ‘ಸಹ್ಯಾದ್ರಿ ಕಾಂಕ್ಲೆವ್’ ಕಾರ್ಯಕ್ರಮಮದ ಸಮಾರೋಪ ಸಮಾರಂಭ ಮತ್ತು ಮಂಗಳೂರು ವಲಯದ ನ್ಯೂ ಏಜ್ ಇನ್‌ಕ್ಯೂಬೆಶನ್ ನೆಟ್‌ವರ್ಕ ಚಾಲನಾ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಕಾರ್ಯಗಾರದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳನ್ನು ಕೇಳಿ ಆಶ್ಚರ್ಯವಾಯಿತು. ವಿದ್ಯಾರ್ಥಿ ಗಳ ಬದುಕಿನಲ್ಲಿ ಸದ್ರಿ ಕಾರ್ಯಗಾರದಲ್ಲಿ ಪಡೆದ ಅನುಭವ ಸಾಧನೆ ಮಾಡಲು ಪ್ರೇರಣೆಯಾಗಲಿ ಎಂದು ಆ್ಯಡಾ ಇ.ಯೋನಥ್ ತಿಳಿಸಿದ್ದಾರೆ.

ಸ್ವ ಚಿಂತನೆ, ವಿಶ್ಲೇಷಣೆ ಅಗತ್ಯ:- ವಿದ್ಯಾರ್ಥಿಗಳು ತಮ್ಮ ಮುಂದಿನ ಬದುಕಿನಲ್ಲಿ ಯಾವುದು ಮುಖ್ಯ ಯಾವುದು ಅಮುಖ್ಯ ಎಂದು ಸ್ವ ಚಿಂತನೆ ಮಾಡಬೇಕು. ವೃತ್ತಿ ಬದುಕಿನಲ್ಲಿ ಜಗತ್ತನ್ನು ತಮ್ಮದೇ ಹೊಸ ದೃಷ್ಟಿಕೋನದಿಂದ ನೋಡುವುದು ಅಗತ್ಯವಿದೆ. ವಿದ್ಯಾರ್ಥಿಗಳು ವಿವಿಧ ಗೋಷ್ಠಿಯಲ್ಲಿ ಕೇಳುತ್ತಿದ್ದ ಆಳವಾದ ಪ್ರಶ್ನೆಗಳು ಅವರಲ್ಲಿರುವ ವಿಜ್ಞಾನ, ತಂತ್ರಜ್ಞಾನದ ಮಾಹಿತಿ ಮಟ್ಟವನ್ನು ಹಾಗೂ ವಿಷಯದ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಆಸಕ್ತಿ ವ್ಯಕ್ತವಾಗಿದೆ ಎಂದು ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಸರ್ಜ್ ಹ್ಯಾರೋಶ್ ತಿಳಿಸಿದ್ದಾರೆ.

ಸಹ್ಯಾದ್ರಿ ಆವರಣದಲ್ಲಿ ನ್ಯೋಜ್ ಇನ್‌ಕ್ಯೂಬೇಶನ್ ನೆಟ್‌ವರ್ಕ್ ಗೆ ಚಾಲನೆ:- ಸಹ್ಯಾದ್ರಿ ಮಹಾ ವಿದ್ಯಾಲಯದ ಆವರಣದಲ್ಲಿ ಕರ್ನಾಟಕ ಸರಕಾರದ ಐ.ಟಿ, ಬಿ.ಟಿ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆಯ ವತಿಯಿಂದ ಮಂಗಳೂರು ವಲಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಸಂಶೋಧನೆ ವಿಜ್ಞಾನದ ಪ್ರಯೋಗಕ್ಕೆ ಪೂರಕವಾದ ಮೂಲಭೂತ ಸೌಕರ್ಯ ಒದಗಿಸಲು ಈ ಕೇಂದ್ರದ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ನೆಟ್‌ವರ್ಕ್ ಕೇಂದ್ರವನ್ನು ಉದ್ಘಾಟಿಸಿದ ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ತಿಳಿಸಿದ್ದಾರೆ.

ಕರ್ನಾಟಕ ಸರಕಾರ ವಿದ್ಯಾರ್ಥಿಗಳ ಸಂಶೋಧನಾ ಚಟುವಟಿಕೆ ಹೆಚ್ಚಿನ ಪೋತ್ಸಾಹ ನೀಡುತ್ತಿದೆ. ರಾಜ್ಯದ ವಿದ್ಯಾರ್ಥಿಗಳು ದೇಶದಲ್ಲಿ ಮಾತ್ರವಲ್ಲಿ ವಿದೇಶ ದಲ್ಲೂ ಹೆಚ್ಚಿನ ಸಂಶೋಧನೆ ಮಾಡಿ ಸಾಧನೆ ಮಾಡಬೇಕೆನ್ನುವುದು ಸರಕಾರದ ಗುರಿಯಾಗಿದೆ. ಬೆಳೆಯುತ್ತಿರುವ ವಾಹನ ದಟ್ಟನೆ, ಸರಕು ಸಾಗಾಟ, ಕೃಷಿ ಕ್ಷೇತ್ರದ ರೋಗ ಗಳ ಬಗ್ಗೆ ಆರೋಗ್ಯ ರಕ್ಷಣೆಯ ಸಮಸ್ಯೆಗಳ ಬಗ್ಗೆ ಹೆಚ್ಚಿನ ಸಂಶೋಧನೆಗೆ ಯುವ ವಿದ್ಯಾರ್ಥಿಗಳು ಆಸಕ್ತಿ ವಹಿಸಲು ಪೂರಕವಾದ ಕೇಂದ್ರಗಳನ್ನು ಹಾಗೂ ಅನುದಾನವನ್ನು ನಿಡಲಾಗುತ್ತಿದೆ ಎಂದು ಗೌರವ ಗುಪ್ತ ತಿಳಿಸಿದರು.

ಸಹ್ಯಾದ್ರಿ ಕಾಂಕ್ಲೆವ್ ಸಮಾರೋಪ :- ಐದು ದಿನಗಳ ಕಾರ್ಯಗಾರದ ವಿವಿಧ ಶಿಕ್ಷಣ ಸಂಸ್ಥೆಗಳಿಂದ 3000 ವಿದ್ಯಾರ್ಥಿಗಳು ಭಾಗವಹಿಸಿದ್ದರು. 12 ಕಾರ್ಯ ಕ್ರಮ 81 ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಸಂಚಾಲಕರು ಸಭೆಗೆ ಮಾಹಿತಿ ನೀಡಿದರು.

ಭಂಡಾರಿ ಫೌಂಡೇಶನ್ನಿನ ಅಧ್ಯಕ್ಷ ಮಂಜುನಾಥ ಭಂಡಾರಿ ವಿಜ್ಞಾನಿಗಳೊಂದಿಗೆ ಸಂವಾದ ಮತ್ತು ಸಮಾಲೋಚನಾ ಕಾರ್ಯಗಾರದಲ್ಲಿ 4000ಕ್ಕೂ ಹೆಚ್ಚು ಮಂದಿ ಭಾಗವಹಿಸಿ ವಿಶೇಷ ಅನುಭವ ಪಡೆದುಕೊಳ್ಳಲು ಸಾಧ್ಯವಾಗಿದೆ.

ವಿಜ್ಞಾನಿಗಳ ಸಾಧನೆ, ಅವರ ಅನುಭವಗಳನ್ನು ನೋಡಿದಾಗ ಅವರು ಸಮಾಜಕ್ಕೆ ದೇವರು ನೀಡಿದ ಕೊಡುಗೆ, ಅವರ ಸಾಧನೆ ಅಷ್ಟು ಶ್ರೇಷ್ಠವಾಗಿದೆ ಎಂದು ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಉಮೇಶ್ ಎಂ.ಬೂಶಿ, ಸಹ್ಯಾದ್ರಿ ಕಾಲೇಜಿನ ನಿರ್ದೇಶಕ ಡಾ.ಡಿ.ಎಲ್. ಪ್ರಭಾಕರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಟ್ರಸ್ಟಿಗಳಾದ ಬಾಲಕೃಷ್ಣ ಭಂಡಾರಿ, ದೇವದಾಸ ಹೆಗ್ಡೆ, ಜಗನ್ನಾಥ ಚೌಟ ಹಾಗೂ ಅತಿಥಿಗಳಾದ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಕೆ. ಭೈರಪ್ಪ, ಎನ್‌ಐಟಿಕೆ ನಿರ್ದೇಶಕ ಉಮಾ ಮಹೇಶ್ವರ ರಾವ್, ಹೊನ್ನೇಗೌಡ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News