ಗಾಂಜಾ ಪ್ರಕರಣ: ಇಬ್ಬರು ವಶಕ್ಕೆ
Update: 2018-01-10 22:55 IST
ಪಡುಬಿದ್ರಿ, ಜ.10: ಪಡುಬಿದ್ರಿ ಬೀಚ್‌ನಲ್ಲಿ ನ. 9ರಂದು ಸಂಜೆ 6:30ರ ಸುಮಾರಿಗೆ ಗಾಂಜಾ ಸೇವಿಸುತ್ತಿದ್ದ ಇಬ್ಬರನ್ನು ಪಡುಬಿದ್ರೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಗಾಂಜಾ ಸೇವಿಸಿ ತೂರಾಡುತ್ತಿದ್ದ ಮಲ್ಲಾರು ಗ್ರಾಮದ ಅಬ್ದುಲ್ ಸತ್ತಾರ್ (32) ಹಾಗೂ ಶಿರ್ವ ಮಟ್ಟಾರು ರಸ್ತೆಯ ಅಬ್ದುಲ್ ಸಮದ್(25) ಎಂಬವರನ್ನು ಪಡುಬಿದ್ರೆ ಪೊಲೀಸರು ಮಣಿಪಾಲ ಕೆಎಂಸಿ ಆಸ್ಪತ್ರೆಯ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಗಳ ಎದುರು ಹಾಜರುಪಡಿಸಿ ವೈದ್ಯಕೀಯ ತಪಾಸಣೆಗೊಳಪಡಿಸಿದ್ದು, ಇವರಿಬ್ಬರು ಗಾಂಜಾ ಸೇವಿಸಿರುವುದಾಗಿ ವೈದ್ಯರು ದೃಢ ಪತ್ರ ನೀಡಿದ್ದಾರೆ ಎಂದು ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.