×
Ad

ಸೇವಾ ಸಿಂಧು ಅನುಷ್ಠಾನ ಯಶಸ್ವಿಗೊಳಿಸಿ: ಉಡುಪಿ ಜಿಲ್ಲಾಧಿಕಾರಿ

Update: 2018-01-10 23:06 IST

ಉಡುಪಿ, ಜ.10: ಜನರ ಅನುಕೂಲಕ್ಕಾಗಿ ಜಾತಿ ಮತ್ತು ಆದಾಯ ಸರ್ಟಿಫಿಕೇಟ್‌ನ್ನು ಆನ್‌ಲೈನ್ ಮೂಲಕ ಪಡೆಯಲು ಅರ್ಜಿಯನ್ನು ಎಲ್ಲಿಂದ ಬೇಕಾದರೂ ಸಲ್ಲಿಸಬಹುದು. ಇದಕ್ಕೆ ಕಂದಾಯ ನಿರೀಕ್ಷಕರು ಗ್ರಾಮಲೆಕ್ಕಿಗರ ಮೂಲಕ ಅಗತ್ಯ ಮಾಹಿತಿ ಸಂಗ್ರಹಿಸಿ ಅವರಿಗೆ ಸರ್ಟಿಫಿಕೇಟ್‌ನ್ನು ನೀಡ ಬೇಕಾಗುತ್ತದೆಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸ್ಪಷ್ಟಪಡಿಸಿದ್ದಾರೆ.

ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಸೇವಾ ಸಿಂಧು ಸೇವೆಯ ಉದ್ದೇಶವನ್ನು ಅರಿತು ಸರ್ಟಿಫಿಕೇಟ್ ಅಗತ್ಯವಿರುವವರಿಗೆ ನೀಡಲು ರೂಪಿಸಿರುವ ಸೇವೆ ಇದಾಗಿದ್ದು, ಸೂಕ್ತ ದಾಖಲೆಗಳಿಲ್ಲ ಎಂದು ಅರ್ಜಿಯನ್ನು ನಿರಾಕರಿಸುವಂತಿಲ್ಲ ಎಂದು ಸ್ಪಷ್ಟ ಪಡಿಸಿದರು.

ಒಟಿಸಿ ಮೂಲಕ ಅಥವಾ ಗ್ರಾಮಲೆಕ್ಕಿಗರ ಮೂಲಕ ಸೂಕ್ತ ಮಾಹಿತಿಗಳನ್ನು ತಹಶೀಲ್ದಾರ್ ಅವರೇ ಸಂಗ್ರಹಿಸಿ ಅರ್ಜಿಯನ್ನು ವಿಲೇ ಮಾಡಬೆೀಕು ಎಂದೂ ಜಿಲ್ಲಾಧಿಕಾರಿ ವಿವರಿಸಿದರು. ಒಟಿಸಿ ಮೂಲಕ ಅಥವಾ ಗ್ರಾಮಲೆಕ್ಕಿಗರ ಮೂಲಕ ಸೂಕ್ತ ಮಾಹಿತಿಗಳನ್ನು ತಹಶೀಲ್ದಾರ್ ಅವರೇ ಸಂಗ್ರಹಿಸಿ ಅರ್ಜಿಯನ್ನು ವಿಲೇ ಮಾಡಬೇಕು ಎಂದೂ ಜಿಲ್ಲಾಧಿಕಾರಿ ವಿವರಿಸಿದರು.

ಆರ್‌ಟಿಸಿ:  ಇದೇ ರೀತಿ ಇಂಟರ್‌ನೆಟ್ ಮೂಲಕವೇ ಆರ್‌ಟಿಸಿ ಪಡೆಯ ಬಹುದಾಗಿದ್ದು, ಅರ್ಜಿ ಸಲ್ಲಿಸುವವರ ಬಳಿ ಇಂಟರ್‌ನೆಟ್ ಬ್ಯಾಂಕಿಂಗ್ ಅಕೌಂಟ್ ಇರಬೇಕಾಗುತ್ತದೆ. ಅವರು ಇಂಟರ್‌ನೆಟ್ ಮೂಲಕವೇ ನಿಗದಿತ ಶುಲ್ಕವನ್ನು ಪಾವತಿಸಿ ಆರ್‌ಟಿಸಿ ಪಡೆಯಬಹುು ಎಂದು ಸಭೆಗೆ ಮಾಹಿತಿ ನೀಡಿದರು.
ಈ ಕುರಿತು ಹೆಚ್ಚಿನ ಮಾಹಿತಿಗೆ: - http://Land records.karnataka.gov.in  ಇದರ ಮೂಲಕ ಆರ್‌ಟಿಸಿಗೆ ಕ್ಲಿಕ್ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News