×
Ad

ಮತದಾರರ ಪಟ್ಟಿ ಪರಿಷ್ಕರಣೆ ಎಚ್ಚರಿಕೆಯಿಂದ ಮಾಡಿ: ಜಿಲ್ಲಾಧಿಕಾರಿ

Update: 2018-01-10 23:08 IST

ಉಡುಪಿ, ಜ.10: ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಹಾಗೂ ತೆಗೆದು ಹಾಕುವಿಕೆ ಪ್ರಕ್ರಿಯೆಯನ್ನು ಅತ್ಯಂತ ಜಾಗರೂಕವಾಗಿ ಮಾಡಲು ಜಿಲ್ಲೆಯ ಎಲ್ಲಾ ತಹಶೀಲ್ದಾರರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಬುಧವಾರ ಚುನಾವಣಾ ಪೂರ್ವಭಾವಿ ಸಭೆಯ ಸಬಾಧ್ಯಕ್ಷತೆಯನ್ನು ವಹಿಸಿದ ಮಾತನಾಡಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಮತದಾರರ ಪಟ್ಟಿಯಲ್ಲಿ ಲೋಪದೋಷಗಳು ಬಾರದಂತೆ ಎಚ್ಚರಿಕೆಯಿಂದ ಸಿದ್ಧಪಡಿಸಲು ಸೂಚಿಸಿದರು. ಚುನಾವಣಾ ಆಯೋಗ ಈ ಸಂಬಂಧ ಆಡಿಟ್ ತಂಡವೊಂದನ್ನು ಜಿಲ್ಲೆಗೆ ಕಳುಹಿಸಿಕೊಡಲಿದ್ದು ಅದು ಪಟ್ಟಿಯ್ನು ಪರಿಶೀಲನೆ ನಡೆಸಲಿದೆ ಎಂದರು.

ಮತದಾರರ ಪಟ್ಟಿಯನ್ನು ಸಂಬಂಧಪಟ್ಟ ಕಚೇರಿಯಲ್ಲಿ ಪ್ರಕಟಿಸಿ ಮಾಹಿತಿ ಮತದಾರರಿಗೆ ಲ್ಯವಾಗಿಸಬೇಕು. ಪಟ್ಟಿ ಪ್ರಕಟಪಡಿಸಿರುವುದನ್ನು ಬಹು ಮಾಧ್ಯಮಗಳ ಮೂಲಕ ಪ್ರಚುರ ಪಡಿಸಬೇಕು ಎಂದರು. ಹೊರದೇಶದಲ್ಲಿ ರುವ ಮತದಾರರ ಹೆಸರು ಫಾರಂ ನಂಬರ್ 7ರಿಂದ ಡಿಲೀಟ್ ಮಾಡಿ ಫಾರಂ ನಂಬರ್ 6ಎನಲ್ಲಿ ಓವರ್ ಸೀಸ್ ಮತದಾರರೆಂದು ದಾಖಲಿಸಲು ಜ.12 ರವರೆಗೆ ಅವಕಾಶವಿದ್ದು, ಊರಿನಲ್ಲಿರುವವರು ಸಹಾಯಕ ಆಯುಕ್ತರ ಬಳಿ ತಮ್ಮ ಪಾಸ್‌ಪೋರ್ಟ್‌ನೊಂದಿೆ ಖುದ್ದು ಹಾಜರಾಗಬೇಕಿದೆ ಎಂದರು.

ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಲು ಎಲ್ಲ ವಿದ್ಯಾರ್ಥಿಗಳ ಡೈರಿಯಲ್ಲಿ ಮತದಾರರ ಹೆಸರು ನೊಂದಣಿಗೆ ಜ.12 ಕೊನೆಯ ದಿನವಾಗಿದೆ. ತಕ್ಷಣವೇ ಮತಗಟ್ಟೆ ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಹೆಸರು ನೋಂದಾ ಯಿಸಲು ಹೆತ್ತವರಿಗೆ ಮಾಹಿತಿ ನೀಡಿ ಎಂಬ ಸೂಚೆಯನ್ನು ಜಿಲ್ಲಾಧಿಕಾರಿಗಳು ನೀಡಿದರು.

ಸರ್ವಿಸ್ ವೋಟರ್ಸ್‌ ಬಗ್ಗೆ, ಮತಗಟ್ಟೆಗಳಲ್ಲಿ ಮೂಲ ಸೌಕರ್ಯ ಒದಗಿಸುವ ಬಗ್ಗೆ ವಿಶೇಷ ಚೇತನರ ಪಟ್ಟಿ ತಯಾರಿಸಿ ಅವರು ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಿಕೆ ಬಗ್ಗೆ ಖಾತರಿ ಪಡಿಸಿಕೊಳ್ಳಲು ತಹಶೀಲ್ದಾರ್ ಮತ್ತು ಮತಗಟ್ಟೆ ಅಧಿಕಾರಿಗಳುಖುದ್ದು ಪರಿಶೀಲನೆ ನೆಸಲೂ ಜಿಲ್ಲಾಧಿಕಾರಿಗಳು ಸೂಚಿಸಿದರು.

ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದ ಅಹವಾಲು ಸ್ವೀಕರಿಸಲು ಟೋಲ್‌ಫ್ರೀ ನಂಬರ್ ಆರಂಭಿಸಿ ಜನರಿಗೆ ಮಾಹಿತಿ ನೀಡಿ ಎಂದ ಅವರು, ಚುನಾವಣಾ ಆಯೋಗ ಎಲ್ಲ ವ್ಯವಸ್ಥೆಗಳ ಬಗ್ಗೆಯೂ ಸಂಪೂರ್ಣ ನಿಗಾ ಇಡಲಿದೆ ಎಂದು ಜಿಲ್ಲಾಧಿಕಾರಿ ಆದೇಶಿಸಿದರು. ಇವಿಎಂ ಹಾಗೂ ವಿವಿ ಪ್ಯಾಟ್ ಬಗ್ಗೆ ಜನಜಾಗೃತಿ ಮೂಡಿಸಲು ಜಿಲ್ಲಾಧಿಕಾರಿ ಸೂಚಿಸಿದರು. ಸಭೆಯಲ್ಲಿ ಎಸ್‌ಪಿ ಲಕ್ಷ್ಮಣ್ ನಿಂಬರ್ಗಿ, ಜಿಪಂ ಸಿಇಒ ಶಿವಾನಂದ ಕಾಪಶಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News