×
Ad

ಬೋಳಂಗಡಿ: ಜ.12ರಂದು 'ಉಮ್ಮುಲ್ ಕುರಾ ತಹ್‌ಫೀಝುಲ್ ಕುರ್‌ಆನ್' ಮದ್ರಸ ಉದ್ಘಾಟನೆ

Update: 2018-01-10 23:15 IST

ಬಂಟ್ವಾಳ, ಜ. 10: ಪಾಣೆಮಂಗಳೂರು ಸಮೀಪದ ಬೋಳಂಗಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ "ಉಮ್ಮುಲ್ ಕುರಾ ತಹ್‌ಫೀಝುಲ್ ಕುರ್‌ಆನ್" ಮದ್ರಸದ ಉದ್ಘಾಟನಾ ಕಾರ್ಯಕ್ರಮ ಜ. 12ರಂದು ಸಂಜೆ 4ಕ್ಕೆ ಮದ್ರಸದ ವಠಾರದಲ್ಲಿ ನಡೆಯಲಿದೆ ಎಂದು ಮರ್ಹೂಮ್ ಪಿ.ಬಿ. ಹುಸೈನಬ್ಬ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಅಬ್ದುಲ್ ಅಝೀಝ್ ಹೇಳಿದ್ದಾರೆ.

ಬುಧವಾರ ಸಂಜೆ ಬಂಟ್ವಾಳ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ.ಇ.ಹಿಂದ್ ಮಂಗಳೂರು ವಲಯದ ಸಂಚಾಲಕ ಅಕ್ಬರ್‌ಅಲಿ ಉಡುಪಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಆಹಾರ ಸಚಿವ ಯು.ಟಿ.ಖಾದರ್, ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಹಂಪನಕಟ್ಟೆ ಮಸೀದಿಯ ಖತೀಬ್ ಯೂಸುಫ್ ಮೌಲವಿ, ಇಮಾಮ್ ಕೌನ್ಸಿಲ್‌ನ ಅಧ್ಯಕ್ಷ ಜಾಫರ್ ಸಾದಿಕ್, ಅಳೇಕಲ ಮಸೀದಿಯ ಖತೀಬ್ ಮುಸ್ತಫಾ ದಾರಿಮಿ, ತೊಕ್ಕೊಟ್ಟು ಮಸೀದಿಯ ಖತೀಬ್ ಮುಹಮ್ಮದ್ ಕುಂಞಿ, ಪಿಡಬ್ಲ್ಯೂಡಿ ಕಂಟ್ರಾಕ್ಟರ್ ಪಿ.ಬಿ. ಇಬ್ರಾಹೀಂ, ಮಂಗಳೂರು ಇಕ್ರಾ ಅರೆಬಿಕ್ ಕಾಲೇಜಿನ ಪ್ರಾಂಶುಪಾಲ ಸಾಲಿಮ್ ನದ್ವಿ, ಬೋಳಂಗಡಿ ಮಸೀದಿಯ ಖತೀಬ್ ಯಹ್ಯಾ ತಂಙಳ್ ಹಾಗು ಜ.ಇ.ಹಿ. ಸಂಚಾಲಕ ಅಮೀನ್ ಅಹ್ಸನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ಸಂಜೆ 7ಕ್ಕೆ "ಕುರ್‌ಆನ್ ಶಾಂತಿಗಾಗಿ" ಎಂಬ ಶೀರ್ಷಿಕೆಯಲ್ಲಿ ಕನ್ನಡ ಹಾಗೂ ಬ್ಯಾರಿ ಭಾಷೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಲಿದ್ದು, ಬಿ.ಎ. ಮುಹಮ್ಮದ್ ಅಲಿ ಅವರು ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮರ್ಹೂಮ್ ಪಿ.ಬಿ. ಹುಸೈನಬ್ಬ ಚಾರಿಟೇಬಲ್ ಟ್ರಸ್ಟಿ ಡಿ.ಕೆ. ಇಬ್ರಾಹಿಂ, ಕಾರ್ಯದರ್ಶಿ ಸಲೀಂ ಬೋಳಂಗಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News