×
Ad

ಜ.13ರವರೆಗೆ ಪೈವಳಿಕೆಯಲ್ಲಿ ಸನದುದಾನ ಸಮ್ಮೇಳನ

Update: 2018-01-10 23:27 IST

ಮಂಜೇಶ್ವರ, ಜ.10: ಇಲ್ಲಿಗೆ ಸಮೀಪದ ಪೈವಳಿಕೆ ಪಯ್ಯಕ್ಕಿ ಉಸ್ತಾದ್ ಇಸ್ಲಾಮಿಕ್ ಅಕಾಡಮಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅನ್ಸಾರಿಯಾ ಕಾಲೇಜ್ ಆಫ್ ಇಸ್ಲಾಮಿಕ್ ಸೈಯನ್ಸ್‌ನ ದಶ ವಾರ್ಷಿಕ ಪ್ರಥಮ ಸನದುದಾನ ಮಹಾ ಸಮ್ಮೇಳನವು ಜ.13ರವರೆಗೆ ನಡೆಯಲಿದೆ.

ಜ.11ರಿಂದ ಫಿಕ್ಹ್ ಡೆಲಿಬ್ರೇಷನ್ ಸೆಮಿನಾರ್,ಲ್ಯಾಂಗ್ವೇಜ್ ಸ್ಕ್ವಾರ್, ಗ್ರಾಂಡ್ ಮಜ್ಲಿಸುನ್ನೂರ್, ವುಮನ್ಸ್ ಕಾನ್‌ಕ್ಲೇವ್, ಮುಅಲ್ಲಿಂ ಡೆಲಿಗೇಟ್ ಅಸಂಬ್ಲಿ, ಪ್ರವಾಸಿ ಸಮ್ಮಿಲನ, ಸಾಂಸ್ಕಾರಿಕ ಸಂಗಮಗಳು ನಡೆಯಲಿದೆ ಜ.13ರಂದು ರಾತ್ರಿ 7 ಗಂಟೆಗೆ ಸಮಾರೋಪ ಹಾಗೂ ಪ್ರಥಮ ಬಿರುದುದಾನ ಮಹಾಸಮ್ಮೇಳನವನ್ನು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧ್ಯಕ್ಷ ಶೈಖುನಾ ಜಿಫ್ರೀ ಮುತ್ತುಕ್ಕೋಯ ತಂಙಳ್ ಉದ್ಘಾಟಿಸುವರು.

ಸಮಸ್ತ ಕಾರ್ಯದರ್ಶಿ ಶೈಖುನಾ ಅಲಿಕುಟ್ಟಿ ಉಸ್ತಾದ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ನೌಷಾದ್ ಬಾಖವಿ ಚಿರಿಯಂಗೀಝ್ ಮುಖ್ಯ ಪ್ರಭಾಷಣಗೈಯುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News