ಲಂಡನ್:ಸಿಗರೆಟ್ ನೀಡಲು ನಿರಾಕರಿಸಿದ ಭಾರತ ಮೂಲದ ವ್ಯಕ್ತಿಯ ಕೊಲೆ
Update: 2018-01-10 23:29 IST
ಲಂಡನ್, ಜ. 10: ಉತ್ತರ ಲಂಡನ್‌ನ ತನ್ನ ಅಂಗಡಿಯಲ್ಲಿ ಅಪ್ರಾಪ್ತ ವಯಸ್ಕರಿಗೆ ಸಿಗರೆಟ್ ಪೇಪರ್ ನೀಡಲು ನಿರಾಕರಿಸಿದ ಭಾರತ ಮೂಲದ ವ್ಯಕ್ತಿಯೊಬ್ಬರನ್ನು ಥಳಿಸಿ ಹತ್ಯೆ ಮಾಡಲಾಗಿದೆ.
ನಗರದ ಮಿಲ್ ಹಿಲ್ ಎಂಬಲ್ಲಿ ಶನಿವಾರ ರಾತ್ರಿ ದುಷ್ಕರ್ಮಿಗಳು 49 ವರ್ಷದ ವಿಜಯ್ ಪಟೇಲ್ ಎಂಬವರಿಗೆ ಥಳಿಸಿದರು. ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ತಲೆಗಾದ ಗಾಯದಿಂದ ಸೋಮವಾರ ಅವರು ಕೊನೆಯುಸಿರೆಳೆದರು.
ಘಟನೆಗೆ ಸಂಬಂಧಿಸಿ 16 ವರ್ಷದವನೊಬ್ಬನನ್ನು ಬಂಧಿಸಲಾಗಿದೆ.