ಮಂಜೇಶ್ವರದ ಸಂಘ ಪರಿವಾರದ ಕೈವಾಡವಿರುವ ಬಗ್ಗೆ ತನಿಖೆ ನಡೆಸಬೇಕು : ಎಸ್.ಡಿ.ಪಿ.ಐ.
ಮಂಜೇಶ್ವರ, ಜ. 11: ಮಂಗಳೂರು ಕೊಟ್ಟಾರ ಚೌಕಿಯಲ್ಲಿ ನಡೆದ ಬಶೀರ್ ಹತ್ಯೆಯಲ್ಲಿ ಮಂಜೇಶ್ವರದ ಸಂಘ ಪರಿವಾರದ ಕೈವಾಡದ ಕುರಿತು ತನಿಖೆ ನಡೆಸಬೇಕೆಂದು ಎಸ್.ಡಿ.ಪಿ.ಐ ಮಂಜೇಶ್ವರ ಮಂಡಲ ಸಮಿತಿ ಒತ್ತಾಯಿಸಿದೆ.
ಬಶೀರ್ ಹತ್ಯೆಯಲ್ಲಿ ಬಂಧಿತರಾಗಿರುವ ಇಬ್ಬರು ಆರೋಪಿಗಳು ಕಾಸರಗೋಡು ಜಿಲ್ಲೆಯವರಾಗಿದ್ದಾರೆ. ಇದು ಜಿಲ್ಲೆಯ ನಾಯಕರ ಕೈವಾಡದ ಬಗ್ಗೆ ಶಂಖೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಂಜೇಶ್ವರದ ಸಂಘ ಪರಿವಾರದ ಮುಖಂಡರನ್ನು ತನಿಖೆಗೆ ಒಳಸಿದಲ್ಲಿ ಕೊಲೆ ಕುರಿತ ಹೆಚ್ಚಿನ ಮಾಹಿತಿಗಳು ಲಭ್ಯವಾಗಬಹುದೆಂದು, ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ನಡೆದ ಆಕ್ರಮಣದ ಕುರಿತು ಹೆಚ್ಚಿನ ಮಾಹಿತಿಗಳು ದೊರೆಯಬಹುದೆಂದು ಎಸ್.ಡಿ.ಪಿ.ಐ ಸಭೆ ಹೇಳಿದೆ.
ಬಶೀರ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಉಪ್ಪಳ ಅಂಬಾರಿನ ಶ್ರೀಜು ಯಾನೆ ಪಿ.ಕೆ. ಶ್ರೀಜಿತ್, ಮಂಜೇಶ್ವರ ಕುಂಜತ್ತೂರಿನ ಸಂದೇಶ್ ಎಂಬವರು ಜಿಲ್ಲೆಯಲ್ಲಿ ಹಾಗೂ ಮಂಗಳೂರಿನಲ್ಲಿ ವಿವಿಧ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ. ಇತ್ತೀಚೆಗೆ ಕುಂಜತ್ತೂರಿನಲ್ಲಿ ಬಣವೊಂದರ ಪತಾಕೆಯನ್ನು ಹಾಡು ಹಗಲೇ ಕಿಚ್ಚಿಟ್ಟು ಕೋಮು ಸಂಘರ್ಷ ಉಂಟು ಮಾಡಲು ಯತ್ನಿಸಿದ ಸಂಘ ಇದಾಗಿದೆ. ಪೊಲೀಸರು ಮುನ್ನೆಚ್ಚರಿಕೆಯಿಂದ ಕಾರ್ಯಾರಿಸಬೇಕೆಂದು ಎಸ್.ಡಿ.ಪಿ.ಐ. ಹೇಳಿದೆ.
ಸಭೆಯಲ್ಲಿ ಇಕ್ಬಾಲ್ ಹೊಸಂಗಡಿ , ಮಜೀದ್ ವರ್ಕಾಡಿ , ಅನ್ಸಾರ್ ಅಂಗಡಿಮುಗರ್ , ಇಕ್ಬಾಲ್ ಪೊಸೋಟ್ , ಮೊಯ್ದಿನ್ ಹಾಜಿ ಮಚ್ಚಂಪಾಡಿ, ಬಶೀರ್ ಹಾಜಿ ಪಚ್ಚಂಬಳ, ಝಕರಿಯ್ಯಾ ಉದ್ಯಾವರ, ನಿಯಾಝ್ ಕುಂಜತ್ತೂರು ಉಪಸ್ತಿತರಿದ್ದರು.