ಮಹಾನ್ ವ್ಯಕ್ತಿಯನ್ನು ಅವಮಾನಿಸಿ ಕಾಂಗ್ರೆಸ್ ನಿಂದ ಘರ್ಷಣೆ ಉಂಟು ಮಾಡಲು ಯತ್ನ : ಕೊಡಿಯೇರಿ
ಮಂಜೇಶ್ವರ, ಜ. 11: ಮಹಾನ್ ಎ.ಕೆ.ಜಿ. ಯನ್ನು ಅವಮಾನಿಸಿ ಉದ್ರಿಕ್ತರನ್ನಾಗಿಸಿ, ಘರ್ಷಣೆ ನಡೆಸಲು ಕಾಂಗ್ರೆಸ್ ಯತ್ನಿಸುತ್ತಿದೆಯೆಂದು ಸಿ.ಪಿ.ಐ(ಎಂ) ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಆರೋಪಿಸಿದ್ದಾರೆ.
ಸಿ.ಪಿ.ಎಂ ಕಾಸರಗೋಡು ಜಿಲ್ಲಾ ಸಮ್ಮೇಳನದ ಭಾಗವಾಗಿ ಚೆಂಗಳ ಇಂದಿರಾ ನಗರದ ಐ.ರಾಮಣ್ಣ ರೈ ನಗರದಲ್ಲಿ ನಡೆದ ಬಹಿರಂಗ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಎ.ಕೆ.ಜಿ ಯನ್ನು ಅವಹೇಳನ ಮಾಡಿದ ಕಾಂಗ್ರೆಸ್ ನ ಯುವ ಶಾಸಕನ ನಿಲುವನ್ನು ವಿರೋಧಿಸಿ ಕಾಂಗ್ರೆಸ್ ಹೇಳಿಕೆ ನೀಡಬಹುದೆಂದು ನಿರೀಕ್ಷಿಸಿದ್ದೆವು , ಪ್ರಧಾನಿ ಮೋದಿಯನ್ನು ಅವಹೇಳನ ಮಾಡಿದ ಮಣಿಶಂಕರ್ ಅಯ್ಯರ್ ವಿರುದ್ಧ ಕ್ರಮ ಕೈಗೊಂಡ ಕಾಂಗ್ರೆಸ್ ಶಾಸಕನ ವಿರುದ್ಧ ಯಾವುದೇ ಕ್ರಮಕ್ಕೆ ಯಾಕೆ ಮುಂದಾಗಿಲ್ಲ ಯಾಕೆಂದು ಅವರು ಪ್ರಶ್ನಿಸಿದರು.
ಬಿ.ಜೆ.ಪಿ ಮುಖಂಡರನ್ನು ಹೀಯಾಳಿಸಿದರೆ ಪಕ್ಷದಿಂದ ವಜಾಗೊಳಿಸುವ ಕಾಂಗ್ರೆಸ್ ಸಿ.ಪಿ.ಎಂ ನ ಮಹಾನ್ ನಾಯಕನನ್ನು ಹೀಯಾಳಿಸಿದ ಯುವ ಶಾಸಕ ಬಲರಾಂ ರಿಗೆ ಪಟ್ಟ್ ಸೀರೆ ಹಾಗು ಬಳೆ ನೀಡುತ್ತಿದೆ. ಕೇರಳದ ಕಾಂಗ್ರೆಸ್ ಬಿ.ಜೆ.ಪಿ ಯ ಬಿ.ಟೀಂ ಆಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.
ಕೇರಳದಲ್ಲಿ ಕಲಾಪ ಉಂಟು ಮಾಡಲು ಸಂಘ ಪರಿವಾರ ಯತ್ನಿಸುತ್ತಿದೆ. ಕಾಸರಗೋಡು ಮದ್ರಸಾ ಅಧ್ಯಾಪಕನನ್ನು ಯಾವುದೇ ಪ್ರಕೋಪನೆ ಇಲ್ಲದೆ ಕೊಲ್ಲಲಾಯಿತು. ಸಿ.ಪಿ.ಎಂ ವಿರೋಧಿ ನಿಲುವು ತೋರಿಸುವ ಕಾಂಗ್ರೆಸ್ ಆರ್.ಎಸ್.ಎಸ್ ನ್ನು ಪ್ರೋತ್ಸಾಹಿಸುತ್ತಿದೆಯೆಂದು ಅವರು ಆರೋಪಿಸಿದರು.
ನೂತನವಾಗಿ ಆಯ್ಕೆ ಗೊಂಡ ಜಿಲ್ಲಾ ಕಾರ್ಯದರ್ಶಿ ಎಂ.ವಿ ಬಾಲಕೃಷ್ಣನ್ ಮಾಸ್ಟರ್ ಅಧ್ಯಕ್ಷತೆ ವಹಿಸಿದರು. ಸಿ.ಪಿ.ಎಂ ಕೇಂದ್ರ ಸಮಿತಿ ಸದಸ್ಯ ಸಂಸದ ಪಿ.ಕರುಣಾಕರನ್ , ಮಾಜಿ ಜಿಲ್ಲಾ ಕಾರ್ಯದರ್ಶಿ ಕೆ.ಪಿ ಸತೀಶ್ ಚಂದ್ರನ್ , ಸಂಘಾಟಕ ಸಮಿತಿ ಚೈಯರ್ಮಾನ್ ಸಿ.ಎಚ್ಚ್ ಕುಞ್ಞಂಬು , ಕನ್ವೀನರ್ ಕೆ.ಮುಹಮ್ಮದ್ ಹನೀಫ್ ಮೊದಲಾದವರು ಮಾತನಾಡಿದರು.