×
Ad

ಜ.12: ಗೃಹ ಸಚಿವ ರಾಮಲಿಂಗರೆಡ್ಡಿ ಉಡುಪಿಗೆ

Update: 2018-01-11 22:23 IST

ಉಡುಪಿ, ಜ.11: ರಾಜ್ಯ ಗೃಹ ಸಚಿವ ರಾಮಲಿಂಗರೆಡ್ಡಿ ಅವರು  ಜ.12ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಅಪರಾಹ್ನ 12 ಗಂಟೆಗೆ ಬ್ರಹ್ಮಾವರದಲ್ಲಿ ಸೈಂಟ್ ಮೇರೀಸ್ ಆರ್ಥೋಡಾಕ್ಸ್ ಸಿರಿಯನ್ ಕೆಥೆಡ್ರಾಲ್‌ನ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಮೋದ್ ಪ್ರವಾಸ: ಜಿಲ್ಲಾ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್  ಜ.12ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಬೆಳಗ್ಗೆ 9:45ಕ್ಕೆ ಮಣಿಪಾಲ ವಿದ್ಯಾರತ್ನ ನಗರದಲ್ಲಿ ಹೊಟೇಲ್ ಸಾರಾ ಉದ್ಘಾಟನೆ, 11:30ಕ್ಕೆ ಬ್ರಹ್ಮಾವರದಲ್ಲಿ ಸೈಂಟ್ ಮೇರಿಸ್ ಓರ್ಥೋಡಾಕ್ಸ್ ಸಿರಿಯನ್ ಕೆಥೆಡ್ರಾಲ್ ಚರ್ಚಿನ ನೂತನ ಕಟ್ಟಡ ಉದ್ಘಾಟನೆ, ಅಪರಾಹ್ನ 12ಕ್ಕೆ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ದಲ್ಲಿ ಜಿಲ್ಲಾ ಮಟ್ಟದ ಸ್ವಾಮಿ ವಿವೇಕಾನಂದರ 155ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News