ದ. ಚೀನಾ ಸಮುದ್ರದಲ್ಲಿ ಹೂಡಿಕೆಗೆ ಭಾರತಕ್ಕೆ ಆಹ್ವಾನ: ವಿಯೆಟ್ನಾಮ್ ವಿರುದ್ಧ ಕಿಡಿಕಾರಿದ ಚೀನಾ

Update: 2018-01-11 17:06 GMT

ಬೀಜಿಂಗ್, ಜ. 11: ದಕ್ಷಿಣ ಚೀನಾ ಸಮುದ್ರದಲ್ಲಿ ನಿಕ್ಷೇಪ ಪತ್ತೆಹಚ್ಚಲು ಭಾರತವನ್ನು ಆಹ್ವಾನಿಸಿರುವುದಕ್ಕಾಗಿ ಚೀನಾ ಗುರುವಾರ ವಿಯೆಟ್ನಾಮ್ ವಿರುದ್ಧ ಹರಿಹಾಯ್ದಿದೆ. ತನ್ನ ಹಕ್ಕುಗಳ ಮೇಲೆ ಆಕ್ರಮಣ ಮಾಡುವ ಯಾವುದೇ ವ್ಯವಸ್ಥೆಯನ್ನು ಬೀಜಿಂಗ್ ವಿರೋಧಿಸುತ್ತದೆ ಎಂದಿದೆ.

ದಕ್ಷಿಣ ಚೀನಾ ಸಮುದ್ರದಲ್ಲಿ ವಿಯೆಟ್ನಾಮ್‌ಗೆ ಸೇರಿದ ಆರ್ಥಿಕ ವಲಯದಲ್ಲಿರುವ ತೈಲ ಮತ್ತು ಪ್ರಾಕೃತಿಕ ಅನಿಲ ಕ್ಷೇತ್ರದಲ್ಲಿ ಭಾರತೀಯ ಹೂಡಿಕೆಯನ್ನು ವಿಯೆಟ್ನಾಮ್ ಸ್ವಾಗತಿಸುವುದು ಎಂದು ಭಾರತಕ್ಕೆ ವಿಯೆಟ್ನಾಮ್ ರಾಯಭಾರಿ ಟೊನ್ ಸಿನ್ ತನ್ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

‘‘ನಮ್ಮ ನೆರೆಯಲ್ಲಿರುವ ಸಂಬಂಧಪಟ್ಟ ದೇಶಗಳು ಪರಸ್ಪರ ಸಾಮಾನ್ಯ ದ್ವಿಪಕ್ಷೀಯ ಸಂಬಂಧಗಳನ್ನು ಅಭಿವೃದ್ಧಿಪಡಿಸುವುದನ್ನು ಚೀನಾ ವಿರೋಧಿಸುವುದಿಲ್ಲ. ಆದರೆ ಸಂಬಂಧಪಟ್ಟ ದೇಶವೊಂದು ಚೀನಾದ ಕಾನೂನುಬದ್ಧ ಹಕ್ಕುಗಳ ಮೇಲೆ ಅತಿಕ್ರಮಣ ನಡೆಸಲು ಹಾಗೂ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಅಸ್ತವ್ಯಸ್ತಗೊಳಿಸಲು ಅದನ್ನು (ಬಾಂಧವ್ಯವನ್ನು) ನೆಪವಾಗಿ ಬಳಸಿಕೊಳ್ಳುವುದನ್ನು ನಾವು ಬಲವಾಗಿ ವಿರೋಧಿಸುತ್ತೇವೆ’’ ಎಂದು ಚೀನಾದ ವಿದೇಶ ಸಚಿವಾಲಯದ ವಕ್ತಾರ ಲೂ ಕಾಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News