ಉಡುಪಿ: ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲನೆಗೆ ಎಸ್‌ಎಂಎಸ್
ಉಡುಪಿ, ಜ.11: ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂಬು ದನ್ನು ಪರಿಶೀಲಿಸಲು ಜೊತೆಗೆ ಕ್ಷೇತ್ರ ಹಾಗೂ ಮತಗಟ್ಟೆಗಳ ವಿವರಗಳನ್ನು ಕಂಡು ಹಿಡಿಯಲು -9731979899- ಸಂಖ್ಯೆಗೆ ಕೆಎಇಪಿಐಸಿ- ಮತದಾನದ ಗುರುತಿನ ಚೀಟಿಯ ಸಂಖ್ಯೆಯನ್ನು ಎಸ್‌ಎಂಎಸ್ ಕಳುಹಿಸುವ ಮೂಲಕ ಪಡೆಯಬಹುದಾಗಿದೆ. ಜೊತೆಗೆ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಮೊಬೈಲ್ ಆ್ಯಪ್‌ನ್ನು ಸಹಾ ಅಭಿವೃದ್ಧಿಪಡಿಸಿದ್ದು, ಇದರಲ್ಲಿಯೂ ಮತದಾರರು ತಮ್ಮ ಮಾಹಿತಿಗಳನ್ನು ಪಡೆಯಬಹುದಾಗಿದೆ ಚುನಾವಣಾ ಆಯೋಗ ತಿಳಿಸಿದೆ.
ಮತದಾರರು ಮುಂಚಿತವಾಗಿಯೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಾತರಿಪಡಿಸಿಕೊಂಡರಲ್ಲಿ ಕೊನೆ ಕ್ಷಣದ ಗೊಂದಲಗಳಿಗೆ ಅವಕಾಶವಿರುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.
ಪ್ರಸಕ್ತ ಚುನಾವಣೆಯಲ್ಲಿ ಎಲ್ಲ ಮತಯಂತ್ರಗಳಿಗೂ ವಿವಿ ಪ್ಯಾಟ್ ಯಂತ್ರ ಗಳನ್ನು ಜೋಡಿಸುವುದರಿಂದ ಮತದಾರರು ತಾವು ಚಲಾಯಿಸುವ ಮತದ ಕುರಿತು ಖಾತರಿಪಡಿಸಿಕೊಳ್ಳಲು ಸಾಧ್ಯವಿದೆ.
ಜಿಲ್ಲಾಡಳಿತ ಪಕ್ಕಾ ಮತದಾರರ ಪಟ್ಟಿ ತಯಾರಿಕಾ ಪ್ರಕ್ರಿಯೆಯಲ್ಲಿ ನಿರತವಾಗಿದ್ದು, ಮತಗಟ್ಟೆ ಅಧಿಕಾರಿಗಳು ಇಂದು ಬೈಂದೂರು, ಬ್ರಹ್ಮಾವರ ಮುಂತಾದೆಡೆ ತೆರಳಿ ಮತದಾರರ ಪಟ್ಟಿ ಪರಿಶೀಲನೆ, ಮತಗಟ್ಟೆಗಳ ಮೂಲ ಸೌಕರ್ಯ ಪರಿಶೀಲನೆಯಲ್ಲಿ ಪಾಲ್ಗೊಂಡು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.