ಕಂದಾವರ: ಒತ್ತುವರಿ ವಿರುದ್ಧ ಎಚ್ಚರಿಕೆ ಬ್ಯಾನರ್
Update: 2018-01-11 22:46 IST
ಕುಂದಾಪುರ, ಜ.11: ಕಂದಾವರ ಗ್ರಾಪಂ ವ್ಯಾಪ್ತಿಯ ಸಟ್ವಾಡಿ ಸರಕಾರಿ ಭೂಮಿಯಲ್ಲಿದ್ದ 147 ಕುಟುಂಬಗಳ ಅಕ್ರಮ ಗುಡಿಸಲುಗಳನ್ನು ಜ.10ರಂದು ತೆರವುಗೊಳಿಸಿರುವ ಕಂದಾಯ ಅಧಿಕಾರಿಗಳು, ಈ ಸ್ಥಳವನ್ನು ಒತ್ತುವರಿ ಮಾಡಿ ಕೊಂಡಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡುವ ಎಚ್ಚರಿಕೆಯ ಬ್ಯಾನರ್‌ನ್ನು ಹಾಕಿದ್ದಾರೆ.
ಕುಂದಾಪುರ ತಹಶೀಲ್ದಾರ್ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳು ಇಲ್ಲಿ ರುವ ಸರಕಾರಿ ಜಾಗದಲ್ಲಿ ಅಕ್ರಮವಾಗಿ ನೆಲೆಸಿದ್ದ ಕುಟುಂಬಗಳ ಮನೆ ಹಾಗೂ ಗುಡಿಸಲುಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿದ್ದರು. ಇದೀಗ ಕುಂದಾಪುರ ತಾಲೂಕು ಕಂದಾಯ ಇಲಾಖೆಯು ‘ಕಂದಾವರ ಗ್ರಾಮದ ಸರ್ವೆ ನಂ.152/ಪಿ1ರ ಸರಕಾರಿ ಸ್ಥಳವನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಲ್ಲಿ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 192 ಎರಂತೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು’ ಎಂಬ ಎಚ್ಚರಿಕೆಯ ಬ್ಯಾನರ್ ನ್ನು ಹಾಕಿದೆ.