×
Ad

ಶೈಖುನಾ ಬಾವಾ ಉಸ್ತಾದರಿಗೆ ತಾಜುಲ್ ಉಲಮಾ ಪ್ರಶಸ್ತಿ ಪ್ರದಾನ

Update: 2018-01-11 23:55 IST

ಉಳ್ಳಾಲ, ಜ. 11: ಎಸ್ಸೆಸ್ಸೆಫ್, ಎಸ್ ವೈ ಎಸ್ ಅಝಾದ್ ನಗರ ಶಾಖೆ ಇದರ ಒಂದನೆ ವಾರ್ಷಿಕೋತ್ಸವ ದ ಅಂಗವಾಗಿ ಶೈಖುನಾ ತಾಜುಲ್ ಉಲಮಾ ಅನುಸ್ಮರಣೆಯ ಪ್ರಯುಕ್ತ ಇತ್ತೀಚೆಗೆ ಉಳ್ಳಾಲದ ಮಾಸ್ತಿಕಟ್ಟೆಯ ಜಂಕ್ಷನ್ನಲ್ಲಿ ನಡೆದ  ಕಾರ್ಯಕ್ರಮ ದಲ್ಲಿ ಸುಮಾರು 55 ವರ್ಷ ಉಳ್ಳಾಲದಲ್ಲಿಯೇ ದೀನಿ ಸೇವೆ ಮಾಡಿದ ಶೈಖುನಾ ಅಹ್ಮದ್ ಬಾವ ಉಸ್ತಾದರಿಗೆ ಶೈಖುನಾ ತಾಜುಲ್ ಉಲಮಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಇದರ ಅಧ್ಯಕ್ಷ ಸೈಯದ್ ಜಲಾಲ್ ತಂಙಳ್ ಕಾರ್ಯಕ್ರಮ ಆರಂಭಿಸಿದರು. ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಇದರ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಙಳ್ ರವರ ಅಧ್ಯಕ್ಷತೆಯಲ್ಲಿ ಶಿಹಾಬುದ್ದೀನ್ ಸಖಾಫಿ ಅಲ್ ಕಾಮಿಲಿ ಉದ್ಘಾಟನೆ ಮಾಡಿದರು.

ಸುಂದರಿಬಾಗ್ ಜುಮಾ ಮಸೀದಿ ಖತೀಬ್ ಷರೀಫ್ ಸಅದಿ ಉಸ್ತಾದರು ಅನುಸ್ಮರಣಾ ಬಾಷಣ ಮಾಡಿದರು. ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಸಂದೇಶ ಭಾಷಣ ಮಾಡಿದರು.

ಯು ಎಸ್ ಹಂಝ ಹಾಜಿ, ಕೌನ್ಸಿಲರ್ ಇಬ್ರಾಹಿಮ್ ಶೌಕತ್ ,ಬಶೀರ್ ಸಖಾಫಿ ಮೇಲಂಗಡಿ, ಉದ್ಯಮಿ ಉಮರ್ ಮೆಹರಾಜ್, ಹನೀಫ್ ಹಾಜಿ ಮಾಸ್ತಿಕಟ್ಟೆ, ಮುಹಮ್ಮದ್ ಫ್ಯಾನ್ಸಿ, ಎ ಆರ್ ರಫೀಕ್, ಮುಝ್ಝಮ್ಮಿಲ್ ಕೋಟೆಪುರ ಮತ್ತೆತರರು ಉಪಸ್ಥಿತರಿದ್ದರು.

ಸಮಾರೋಪ ಪ್ರಾರ್ಥನೆಗೆ ತಾಜುಲ್ ಉಲಮರ ಮೊಮ್ಮಗ ಸಯ್ಯಿದ್ ಜುನೈದ್ ಇಂಬಿಚ್ಚಿಕೊಯ ತಂಙಳ್ ಕೋಲಾಂಡಿ ನೇತೃತ್ವ ನೀಡಿದರು . ಕಾರ್ಯಕ್ರಮ ದಲ್ಲಿ ಅಲೀಕಲದ ಲದಲ್ ಹಬೀಬ್ ತಂಡವು  ಬುರ್ದಾ  ಆಲಾಪನೆ ಮಾಡಿದರು. ಶಾಕಾಧ್ಯಕ್ಷ ಹಾಫಿಝ್ ಮುಈನುದ್ದೀನ್ ರಝ್ವಿ ಸ್ವಾಗತಿಸಿ, ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News