×
Ad

ಜ. 28ರಿಂದ ಬೆಳ್ಮ ರೆಂಜಾಡಿ ಉರೂಸ್

Update: 2018-01-12 17:32 IST

ಉಳ್ಳಾಲ, ಜ. 12: ಬೆಳ್ಮ ಗ್ರಾಮದ ದೇರಳಕಟ್ಟೆಯ ರೆಂಜಾಡಿ ಮಖಾಂ ಉರೂಸ್ ಪ್ರಯುಕ್ತ 7 ದಿವಸಗಳ ಮತ ಪ್ರವಚನ ಜ. 28 ರಿಂದ ಫೆಬ್ರವರಿ 4ರ ತನಕ ಬೆಳ್ಮ ಕೇಂದ್ರ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ.

ಜ.28ರಂದು ಪೇರೋಡು ಮುಹಮ್ಮದ್ ಅಝ್ಝರಿ, ಜ. 29ರಂದು ಪಿ.ಎಂ. ಅನ್ಸಾರ್ ಫೈಝಿ ಬುರ್ ಹಾರಿ, ಜ. 30ರಂದು ಶಾಕೀರ್ ಬಾಖವಿ ಮಂಬಾಡ್, ಜ.31ರಂದು ಮುಹಮ್ಮದ್ ಅಶ್ರಫ್ ರಹ್ಮಾನಿ  ಚೌಕಿ ಕಾಸರಗೋಡು, ಫೆ. 1ರಂದು ಬಿ.ಎಂ ರಶೀದ್ ಸ ಅದಿ ಬೋಳಿಯಾರ್, ಫೆ. 2ರಂದು ಅಬ್ದುಲ್ ಅಝೀಝ್ ಅಶ್ರಫಿ ಪಾಣತ್ತೂರು ಫೆ.3ರಂದು ಬಿ.ಎಚ್ ಅಬೂಸ್ವಾಲಿಹ್ ಉಸ್ತಾದ್ ಮತ್ತು ಎನ್.ಎಚ್ ಅದಂ ಫೈಝಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಫೆ. 4ರಂದು ಸಮಾರೋಪ ಸಮಾರಂಭ ನಡೆಯಲಿದೆ. ಅಸರ್ ನಮಾಝಿನ ಬಳಿಕ ಕೂಟು ಝಿಯಾರತ್ ಕೆ.ಪಿ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್ ನೇತೃತ್ವ‌ದಲ್ಲಿ ಮುಹಮ್ಮದ್ ಶರೀಫ್ ಬಾಖವಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.  ಸಂಜೆ 5ಗಂಟೆಗೆ ಸೌಹಾರ್ದ ಸಂಗಮ, ಇಶಾ ನಮಾಝಿನ ಬಳಿಕ ಸ್ವಲಾತ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ಹೈ ದ್ರೋಸ್ ತಂಙಳ್ ಕಿಲ್ಲೂರು ನೇತೃತ್ವದಲ್ಲಿ ಕೇಂದ್ರ ಬೆಳ್ಮ ಜುಮಾ ಮಸೀದಿ ಅಧ್ಯಕ್ಷ ಬಿ.ಎಸ್ ಇಸ್ಮಾಯಿಲ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News