ಪುತ್ತೂರು: ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ, ಗ್ರಾಮ ವಿಕಾಸ ಸಮಾವೇಶ
ಪುತ್ತೂರು, ಜ. 12: ನಾಗಾಲ್ಯಾಂಡ್ ಸೇರಿದಂತೆ ಈಶಾನ್ಯ ಭಾರತದ ರಾಜ್ಯಗಳಲ್ಲಿ ಸೇವಾ ಕೈಂಕರ್ಯ ನಡೆಸುವಂತೆ ನಾನು ನೀಡಿದ ಆಮಂತ್ರಣಕ್ಕೆ ಸಂಘ ಪರಿವಾರ ಮೂರು ವರ್ಷಗಳಿಂದ ಯಾವುದೇ ರೀತಿಯ ಸ್ಪಂದನೆ ನೀಡಿಲ್ಲ ಎಂದು ನಾಗಾಲ್ಯಾಂಡ್‌ನ ರಾಜ್ಯಪಾಲರೂ, ಹಿರಿಯ ಆರೆಸ್ಸೆಸ್ ಮುಖಂಡರೂ ಆದ ಪಿ.ಬಿ. ಆಚಾರ್ಯ (ಪದ್ಮನಾಭ ಆಚಾರ್ಯ) ಅವರು ಸಂಘ ಪರಿವಾರ ಸಂಘಟನೆಗಳ ವಿರುದ್ಧ ಅಸಮಾಧಾನ-ಸಾತ್ವಿಕ ಆಕ್ರೋಶ ವ್ಯಕ್ತಪಡಿಸಿದರು.
ಪುತ್ತೂರು ನೆಹರೂ ನಗರದ ವಿವೇಕಾನಂದ ಕಾಲೇಜಿನ ಆವರಣದಲ್ಲಿ ಶುಕ್ರವಾರ ನಡೆದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಆಯೋಜಿಲಾದ ಗ್ರಾಮ ವಿಕಾಸ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಸದ ನಳಿನ್ ಕುಮಾರ್ ಕಟೀಲ್, ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ ಮಾಜಿ ಶಾಸಕ ಕೆ. ರಾಮ ಭಟ್, ಸೀತಾರಾಮ ಕೆದಿಲಾಯ, ನ.ಸೀತಾರಾಮ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್, ಡಾ. ಪ್ರಭಾಕರ್ ಭಟ್ ಹಾಗು ಇತರರು ಉಪಸ್ಥಿತರಿದ್ದರು.