ಮಂಗಳೂರು : ಜ.14ರಂದು ಟಿಡಿಎಫ್‌ನ ನೂತನ ಮಳಿಗೆ ಉದ್ಘಾಟನೆ

Update: 2018-01-12 15:20 GMT

ಮಂಗಳೂರು, ಜ.12: ವಿಶೇಷ ಹಾಗೂ ಸೊಗಸಾದ ಚಿನ್ನ ಹಾಗೂ ವಜ್ರಗಳ ವಿನ್ಯಾಸಭರಿತ ಆಭರಣಗಳಿಗೆ ಹೆಸರುವಾಸಿಯಾಗಿರುವ ಮುಂಬೈಯ ಟಿಡಿಎಫ್ ಡೈಮಂಡ್ ಫ್ಯಾಕ್ಟರಿಯ ಮಂಗಳೂರಿನ ನೂತನ ಮಳಿಗೆ ಜ.14ರಂದು ಉದ್ಘಾಟನೆಗೊಳ್ಳಲಿದೆ.

ನಗರದ ಫಳ್ನೀರ್ ರಸ್ತೆಯ ಅಥೆನಾ ಆಸ್ಪತ್ರೆ ಎದುರಿನ ಮಾರ್ಝ್ ಚೇಂಬರ್ಸ್‌ನಲ್ಲಿ ನೂತನ ಮಳಿಗೆ ಉದ್ಘಾಟನೆಗೊಳ್ಳಲಿದೆ. ಉದ್ಘಾಟನಾ ಸಮಾರಂಭದ ಅಂಗವಾಗಿ ವಜ್ರಾಭರಣಗಳ ಮೇಲೆ ಶೂನ್ಯ ತಯಾರಿಕಾ ವೆಚ್ಚ (ಎರಡು ಲಕ್ಷ ರೂ.ಗಿಂತ ಅಧಿಕ ಮೌಲ್ಯದ ಖರೀದಿಗೆ) ಜತೆಗೆ ಚಿನ್ನಾಭರಣಗಳ ಮೇಲೆ ಶೇ. 25ರಷ್ಟು ತಯಾರಿಕಾ ವೆಚ್ಚದಲ್ಲಿ ಕಡಿತ (ಎರಡು ಲಕ್ಷ ರೂ.ಗಿಂತ ಅಧಿಕ ಮೌಲ್ಯದ ಖರೀದಿಗೆ) ಸೌಲಭ್ಯನ್ನು ಗ್ರಾಹಕರು ಪಡೆಯಬಹುದು. ಆಕರ್ಷಕ ಚಿನ್ನ ಹಾಗು ವಜ್ರಾಭರಣಗಳನ್ನು ಮಿತ ದರದಲ್ಲಿ ನೀಡುವುದು ಟಿಡಿಎಫ್ ಉದ್ದೇಶ. ಈ ಸುವರ್ಣಾವಕಾಶವನ್ನು ಗ್ರಾಹಕರು ಬಳಸಿಕೊಂಡು ತಮ್ಮ ಅವಿಸ್ಮರಣೀಯ ಕ್ಷಣಗಳನ್ನು ಟಿಡಿಎಸ್‌ನ ಆಭರಣಗಳೊಂದಿಗೆ ಬೆಳಗಿಸುವಂತೆ ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

1999ರಲ್ಲಿ ಟಿಡಿಎಫ್- ಡೈಮಂಡ್ ಫ್ಯಾಕ್ಟರಿ ಆರಂಭಗೊಂಡಿದ್ದು, ಈಗ ದೇಶದ ಮುಂಚೂಣಿ ಆಭರಣ ತಯಾರಕರು, ಸರಬರಾಜುದಾರರು ಹಾಗು ರಿಟೇಲ್  ವ್ಯಾಪಾರ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಗೌತಮ್ ಸಿಂಘ್ವಿ ಮತ್ತು ಪ್ರಸನ್ನ ಶೆಟ್ಟಿ ಎಂಬಿಬ್ಬರು ಬಾಲ್ಯದ ಗೆಳೆಯರು ಆರಂಭಿಸಿದ ಟಿಡಿಎಸ್- ದ ಡೈಮಂಡ್ ಫ್ಯಾಕ್ಟರಿ ಬ್ರಾಂಡ್ ಇಂದು ದೇಶದಲ್ಲಿ ಕ್ಷಿಪ್ರವಾಗಿ ಬೆಳೆಯುತ್ತಿರುವ ಪ್ರಮುಖ ಆಭರಣಗಳ ಸಂಸ್ಥೆಗಳಲ್ಲಿ ಒಂದಾಗಿದೆ. ಈಗಾಗಲೇ ಅಂಧೇರಿ, ಬಾಂದ್ರಾ, ವಾಶಿಯಲ್ಲಿ ಮಳಿಗೆಗಳಿದ್ದು, ಇದೀಗ ಮಂಗಳೂರಿನಲ್ಲಿ ನಾಲ್ಕನೆ ಮಳಿಗೆಯನ್ನು ಆರಂಭಿಸಲಾಗಿದೆ. ಸೆಲೆಬ್ರಿಟಿಗಳೂ ಟಿಡಿಎಫ್ ಆಭರಣಗಳನ್ನು ಮೆಚ್ಚಿದ್ದಾರೆ. 

ಸಹಾಯಕ ಪಾಲುದಾರರಾದ ವಿರಾಜ್ ಹೆಗ್ಡೆ ಮತ್ತು ಸುಧಾ ಶೆಟ್ಟಿಯವರ ನೇತೃತ್ವದಲ್ಲಿ ಕಂಪನಿಯು ದಕ್ಷಿಣ ಭಾರತದಲ್ಲಿ ತನ್ನ ವ್ಯವಹಾರವನ್ನು ವಿಸ್ತರಿಸಲು ಮುಂದಾಗಿದೆ. ಅತ್ಯುನ್ನತ ಗುಣಮಟ್ಟದ ವಿನ್ಯಾಸಗಳಿಂದ ಕೂಡಿದ ವಜ್ರ ಹಾಗೂ ಚಿನ್ನಾಭರಣಗಳಿಗೆ ಟಿಡಿಎಸ್ ಆದ್ಯತೆ ನೀಡುತ್ತಿರುವುದರ ಜತೆಗೆ ಇದು ಗ್ರಾಹಕ ಸ್ನೇಹಿಯಾಗಿಯೂ ಉತ್ತಮ ದರದಲ್ಲಿ ಲಭ್ಯವಾಗಲಿದೆ.

ಕಳೆದ ಎಂಟು ವರ್ಷಗಳಿಂದ ದಕ್ಷಿಣ ಕನ್ನಡದ ಮಾರುಕಟ್ಟೆಯಲ್ಲಿ ತನ್ನ ಛಾಪನ್ನು ಮೂಡಿಸಿರುವ ಟಿಡಿಎಸ್, ಈಗಾಗಲೇ ಹಲವಾರು ಪ್ರದರ್ಶನಗಳ ಮೂಲಕ ಗ್ರಾಹಕರನ್ನು ಆಕರ್ಷಿಸಿದೆ. ಕಂಪನಿಯು ಈಗಾಗಲೇ ಮಾರುಕಟ್ಟೆ ಕಚೇರಿಯನ್ನು ಹೊಂದಿದ್ದು, ಈ ಪ್ರದೇಶದಲ್ಲಿ  ಅಪಾರ ಗ್ರಾಹಕರನ್ನೂ ಹೊಂದಿದೆ.

ಸಾಂಪ್ರದಾಯಿಕ ದಕ್ಷಿಣ ಭಾರತೀಯ ಮತ್ತು ಸಮಕಾಲೀನ ಆಭರಣಗಳ ಸಮ ಪ್ರಮಾಣದ ಮಿಶ್ರಣದಿಂದ ಕೂಡಿದ ತನ್ನ ವಿಶೇಷ ಹಾಗೂ ಸೊಗಸಾದ ವಜ್ರ ಹಾಗೂ ಚಿನ್ನಾಭರಣಗಳ ವಿನ್ಯಾಸಗಳಿಗೆ ಟಿಡಿಎಫ್ ಹೆಸರುವಾಸಿಯಾಗಿದೆ.

ವಧುವಿನ ಚಿನ್ನಾಭರಣಗಳ ರಚನೆಗೆ ಹೆಸರುವಾಸಿಯಾಗಿರುವ ಟಿಡಿಎಫ್ ಆಧುನಿಕ ಭಾರತೀಯ ವಧುವಿನ ಬೇಡಿಕೆಗೆ ಅನುಗುಣವಾಗಿ ವಿಶೇಷ ಮಾದರಿಯ ‘ವಧುವಿನ ಹೆಮ್ಮೆ’ (ಬ್ರೈಡ್ಸ್ ಪ್ರೈಡ್) ಎಂಬ ಸಂಗ್ರಹವನ್ನು ಹೊಂದಿದೆ ಎಂದು ಸಂಸ್ಥೆಯ ಮುಖ್ಯಸ್ಥರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News