ಎನ್‌ಆರ್‌ಐ ಯುವಕನಿಗೆ 8 ವರ್ಷ ಜೈಲು

Update: 2018-01-13 17:47 GMT

 ಲಂಡನ್,ಜ.13: ತಾನು ಬಿಳಿಯ ಜನಾಂಗೀಯ ಯುವತಿಯನ್ನು ಪ್ರೇಮಿಸುತ್ತಿರುವುದನ್ನು ವಿರೋಧಿಸಿದ ತನ್ನ ಸಂಪ್ರದಾಯವಾದಿ ಸಿಖ್ ತಂದೆಯನ್ನು ಕೊಲೆ ಮಾಡಲು ಆನ್‌ಲೈನ್‌ನಲ್ಲಿ ಸ್ಫೋಟಕಗಳನ್ನು ಖರೀದಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ಮೂಲದ ಹದಿಹರೆಯದ ಯುವಕನಿಗೆ, ಬ್ರಿಟನ್‌ನ ನ್ಯಾಯಾಲಯವೊಂದು ಎಂಟು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಆರೋಪಿ ಗುರುತೇಜ್ ಸಿಂಗ್ ರಾಂಧಾವಾ ಎಂಬಾತ ಆನ್‌ಲೈನ್‌ನಲ್ಲಿ ಸ್ಫೋಟಕಗಳನ್ನು ಖರೀದಿಸಿರುವುದನ್ನು ಪತ್ತೆಹಚ್ಚಿದ ಬ್ರಿಟನ್ ರಾಷ್ಟ್ರೀಯ ಕ್ರೈಮ್ ಏಜೆನ್ಸಿಯ ಪೊಲೀಸರು ಮಾರುವೇಷದಲ್ಲಿ ಯುವಕನನ್ನು ಸಂಪರ್ಕಿಸಿ ಆತನಿಗೆ ಸ್ಫೋಟಕದ ಬದಲಿಗೆ ಅಪಾಯಕಾರಿಯಲ್ಲದ ನಕಲಿ ಸಾಧನವೊಂದನ್ನು ಹಸ್ತಾಂತರಿಸಿದ್ದರು. ಆನಂತರ ಆತನನ್ನು ಸಾಕ್ಷಸಮೇತವಾಗಿ ಬಂಧಿಸಿದ್ದರು.

        19 ವರ್ಷ ವಯಸ್ಸಿನ ರಾಂಧಾವಾ, ತನ್ನ ತಂದೆಯ ಪ್ರಾಣಕ್ಕೆ ಅಪಾಯವುಂಟು ಮಾಡುವ ದುರುದ್ದೇಶದಿಂದ ಸ್ಫೋಟಕಗಳನ್ನು ಹೊಂದಲು ಯತ್ನಿಸಿದ ಪ್ರಕರಣದಲ್ಲಿ ತಪ್ಪಿತಸ್ಥನೆಂದು ನ್ಯಾಯಾಲಯ ಕಳೆದ ನವೆಂಬರ್‌ನಲ್ಲಿ ತೀರ್ಪುನೀಡಿದ್ದು, ಶುಕ್ರವಾರ ಆತನಿಗೆ ಶಿಕ್ಷೆಯ ಪ್ರಮಾಣವನ್ನು ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News