ಮಂಗಳೂರಿನಲ್ಲಿ ಟಿಡಿಎಫ್‌ನ ನೂತನ ಮಳಿಗೆ ಶುಭಾರಂಭ

Update: 2018-01-14 07:48 GMT

ಮಂಗಳೂರು, ಜ.14: ವಿನ್ಯಾಸಭರಿತ ವಿಶೇಷ ಚಿನ್ನ ಹಾಗೂ ವಜ್ರಗಳ ಆಭರಣಗಳಿಗೆ ಹೆಸರುವಾಸಿಯಾಗಿರುವ ಮುಂಬೈಯ ಟಿಡಿಎಫ್ ಡೈಮಂಡ್ ಫ್ಯಾಕ್ಟರಿಯ ಮಂಗಳೂರಿನ ನೂತನ ಮಳಿಗೆ ಇಂದು ಉದ್ಘಾಟನೆಗೊಂಡಿತು.

ನಗರದ ಫಳ್ನೀರ್ ರಸ್ತೆಯ ಅಥೆನಾ ಆಸ್ಪತ್ರೆ ಎದುರಿನ ಮಾರ್ಝ್ ಚೇಂಬರ್ಸ್‌ನಲ್ಲಿ ನೂತನ ಮಳಿಗೆಗೆ ಟಿಡಿಎಫ್‌ನ ನಿರ್ದೇಶಕ ಪ್ರಸನ್ನ ಶೆಟ್ಟಿಯವರ ಮಾತೃಶ್ರೀ ಪ್ರೇಮಾವತಿ ಶೆಟ್ಟಿಯವರು ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಪ್ರಸನ್ನ ಶೆಟ್ಟಿ, ಗೌತಮ್ ಸಿಂಘ್ವಿ, ವಿರಾಜ್ ಹೆಗ್ಡೆ, ಸುಧಾ ಶೆಟ್ಟಿಯವರು ತಮ್ಮ ಕುಟುಂಬದವರ ಜತೆ ದೀಪ ಬೆಳಗಿಸಿದರು. ಈ ಸಂದರ್ಭ ಉಪಸ್ಥಿತರಿದ್ದ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ ಶುಭ ಹಾರೈಸಿದರು.

ಉದ್ಘಾಟನಾ ಸಮಾರಂಭದ ಅಂಗವಾಗಿ ವಜ್ರಾಭರಣಗಳ ಮೇಲೆ ಶೂನ್ಯ ತಯಾರಿಕಾ ವೆಚ್ಚ (ಎರಡು ಲಕ್ಷ ರೂ.ಗಿಂತ ಅಧಿಕ ಮೌಲ್ಯದ ಖರೀದಿಗೆ) ಜತೆಗೆ ಚಿನ್ನಾಭರಣಗಳ ಮೇಲೆ ಶೇ. 25ರಷ್ಟು ತಯಾರಿಕಾ ವೆಚ್ಚದಲ್ಲಿ ಕಡಿತ (ಎರಡು ಲಕ್ಷ ರೂ.ಗಿಂತ ಅಧಿಕ ಮೌಲ್ಯದ ಖರೀದಿಗೆ) ಸೌಲಭ್ಯವನ್ನು ಗ್ರಾಹಕರಿಗೆ ನೀಡಲಾಗುತ್ತಿದೆ ಎಂದು ಟಿಡಿಎಫ್‌ನ ಮುಖ್ಯಸ್ಥರು ತಿಳಿಸಿದ್ದಾರೆ.

1999ರಲ್ಲಿ ಟಿಡಿಎಫ್- ಡೈಮಂಡ್ ಫ್ಯಾಕ್ಟರಿ ಆರಂಭಗೊಂಡಿದ್ದು, ದೇಶದ ಮುಂಚೂಣಿ ಆಭರಣ ತಯಾರಕರು, ಸರಬರಾಜುದಾರರು ಹಾಗೂ ರಿಟೇಲ್ ವ್ಯಾಪಾರ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಗೌತಮ್ ಸಿಂಘ್ವಿ ಮತ್ತು ಪ್ರಸನ್ನ ಶೆಟ್ಟಿ ಎಂಬಿಬ್ಬರು ಬಾಲ್ಯದ ಗೆಳೆಯರು ಆರಂಭಿಸಿದ ಟಿಡಿಎಸ್- ದ ಡೈಮಂಡ್ ಫ್ಯಾಕ್ಟರಿ ಬ್ರಾಂಡ್ ಇಂದು ದೇಶದಲ್ಲಿ ಕ್ಷಿಪ್ರವಾಗಿ ಬೆಳೆಯುತ್ತಿರುವ ಪ್ರಮುಖ ಆಭರಣಗಳ ಸಂಸ್ಥೆಗಳಲ್ಲಿ ಒಂದಾಗಿದೆ. ಈಗಾಗಲೇ ಅಂಧೇರಿ, ಬಾಂದ್ರಾ, ವಾಶಿಯಲ್ಲಿ ಮಳಿಗೆಯನ್ನು ಹೊಂದಿದ್ದು, ಇದೀಗ ಮಂಗಳೂರಿನಲ್ಲಿ ನಾಲ್ಕನೆ ಮಳಿಗೆ ಶುಭಾರಂಭಗೊಂಡಿದೆ.

ಸಹಾಯಕ ಪಾಲುದಾರರಾದ ವಿರಾಜ್ ಹೆಗ್ಡೆ ಮತ್ತು ಸುಧಾ ಶೆಟ್ಟಿಯವರ ನೇತೃತ್ವದಲ್ಲಿ ಕಂಪೆನಿಯು ದಕ್ಷಿಣ ಭಾರತದಲ್ಲಿ ತನ್ನ ವ್ಯವಹಾರವನ್ನು ವಿಸ್ತರಿಸಲು ಮುಂದಾಗಿದೆ.

ವಧುವಿನ ಚಿನ್ನಾಭರಣಗಳ ರಚನೆಗೆ ಹೆಸರುವಾಸಿಯಾಗಿರುವ ಟಿಡಿಎಫ್ ಆಧುನಿಕ ಭಾರತೀಯ ವಧುವಿನ ಬೇಡಿಕೆಗೆ ಅನುಗುಣವಾಗಿ ವಿಶೇಷ ಮಾದರಿಯ ‘ವಧುವಿನ ಹೆಮ್ಮೆ’ (ಬ್ರೈಡ್ಸ್ ಪ್ರೈಡ್) ಎಂಬ ಸಂಗ್ರಹವನ್ನು ಹೊಂದಿದೆ. ಸಾಂಪ್ರದಾಯಿಕ ದಕ್ಷಿಣ ಭಾರತೀಯ ಮತ್ತು ಸಮಕಾಲೀನ ಆಭರಣಗಳ ಸಮಪ್ರಮಾಣದ ಮಿಶ್ರಣದಿಂದ ಕೂಡಿದ ವಿಶೇಷ ಹಾಗೂ ಸೊಗಸಾದ ವಜ್ರ ಹಾಗೂ ಚಿನ್ನಾಭರಣಗಳ ಅಪಾರ ಸಂಗ್ರಹವು ಮಳಿಗೆಯಲ್ಲಿ ಗ್ರಾಹಕರಿಗೆ ಅತ್ಯುತ್ತಮ ದರಗಳಲ್ಲಿ ಲಭ್ಯವಿದೆ. ಅತ್ಯುನ್ನತ ಗುಣಮಟ್ಟದ ವಿನ್ಯಾಸಗಳಿಂದ ಕೂಡಿದ ವಜ್ರ ಹಾಗೂ ಚಿನ್ನಾಭರಣಗಳಿಗೆ ಟಿಡಿಎಸ್ ಆದ್ಯತೆ ನೀಡುತ್ತಿದೆ. ಜತೆಗೆ ಬೆಲೆಯಲ್ಲಿಯೂ ಗ್ರಾಹಕ ಸ್ನೇಹಿಯಾಗಿದೆ ಎಂದು ಮಳಿಗೆಯ ಮುಖ್ಯಸ್ಥರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News