ಮಂಗಳೂರು: ‘ಅಲ್ ಹಾಫಿಲ್’ ಹಜ್-ಉಮ್ರಾ ಸರ್ವಿಸಸ್ ಶುಭಾರಂಭ

Update: 2018-01-14 07:57 GMT

ಮಂಗಳೂರು, ಜ. 14: ಕಂಕನಾಡಿಯ ಮಂಗಳೂರು ಗೇಟ್ ಸಂಕೀರ್ಣದ ಮೊದಲ ಅಂತಸ್ತಿನಲ್ಲಿರುವ ನೂತನ ‘ಅಲ್ ಹಾಫಿಲ್’ ಹಜ್ ಆ್ಯಂಡ್ ಉಮ್ರಾ ಸರ್ವಿಸಸ್ ರವಿವಾರ ಶುಭಾರಂಭಗೊಂಡಿತು.

ನಗರದ ಹಂಪನಕಟ್ಟದಲ್ಲಿರುವ ಮಸ್ಜಿದೇ ನೂರ್‌ನ ಖತೀಬ್ ಮೌಲವಿ ಅಬ್ದುಲ್ ಅಝೀಝ್ ಅವರು ರಿಬ್ಬನ್ ಕತ್ತರಿಸಿ ನೂತನ ಮಳಿಗೆಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಎ.ಕೆ. ಗ್ರೂಪ್‌ನ ಅಹ್ಮದ್ ಎ.ಕೆ., ಇಬ್ರಾಹೀಂ ಕೋಡಿಜಾಲ್, ಅಬೂಬಕರ್ ಕೋಡಿಜಾಲ್, ಪಿ.ಸಿ. ಹಾಶಿರ್ ಹಾಗೂ ಸಂಸ್ಥೆಯ ವ್ಯವಸ್ಥಾಪಕ ಪಾಲುದಾರ ಮುಹಮ್ಮದ್ ಹನೀಫ್, ಪಾಲುದಾರರಾದ ಮುಹಮ್ಮದ್ ರಯೀಝ್, ಇಮಾಮ್ ಶಾಫಿ ಮೊದಲಾದವರು ಉಪಸ್ಥಿತರಿದ್ದರು.

ಮೌಲವಿ ಅಬ್ದುಲ್ ಅಝೀಝ್ ಮಾತನಾಡಿ, ನಗರದ ಹಲವೆಡೆಗಳಲ್ಲಿ ಹಜ್, ಉಮ್ರಾಗಳಿಗೆ ಸಂಬಂಧಿಸಿ ಹಲವು ಸೇವೆಗಳು ಜನರಿಗೆ ಲಭ್ಯವಿದ್ದು, ಈ ಹಿನ್ನೆಲೆಯಲ್ಲಿ ನೂತನವಾಗಿ ಆರಂಭಿಸಲಾಗಿರುವ ಅಲ್ ಹಾಫಿಲ್’ ಸಂಸ್ಥೆಯವರ ಸೇವೆ ಮಾದರಿಯಾಗಲಿ ಎಂದರು ಹಾರೈಸಿದರು.

ಧಾರ್ಮಿಕವಾಗಿ ಇಂತಹ ಸೇವೆಗೆ ಹೆಚ್ಚಿನ ಪ್ರಾಮುಖ್ಯತೆ ಇರುವುದರಿಂದ ಇದನ್ನು ಮನದಟ್ಟು ಮಾಡಿಕೊಂಡು ಉತ್ತಮ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ಅವರು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News