​ದೀಪಕ್, ಬಶೀರ್ ಹತ್ಯೆ ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ಎಂ.ಫ್ರೆಂಡ್ಸ್ ಅಭಿನಂದನೆ

Update: 2018-01-14 11:30 GMT

ಮಂಗಳೂರು, ಜ. 14: ದೀಪಕ್ ರಾವ್ ಹತ್ಯೆ ಆರೋಪಿಗಳನ್ನು ಹಾಗೂ ಆ ನಂತರ ಮುದಸ್ಸಿರ್ ಹಲ್ಲೆ ಆರೋಪಿಗಳನ್ನು ತಕ್ಷಣವೇ ಬಂಧಿಸಿ ಸಂಭಾವ್ಯ ಕೋಮು ಸಂಘರ್ಷವನ್ನು ತಪ್ಪಿಸಿದ ಪೊಲೀಸರನ್ನು ಎಂ.ಫ್ರೆಂಡ್ಸ್ ವತಿಯಿಂದ  ಸಚಿವ ಯು.ಟಿ. ಖಾದರ್ ಅಭಿನಂದಿಸಿದರು.

ಮಂಗಳೂರು ಫಳ್ನೀರ್ ನ ಗ್ರೀನ್ ವುಡ್ ಅಪಾರ್ಟ್ ಮೆಂಟ್ ನಲ್ಲಿ ನಡೆದ ಎಂ. ಫ್ರೆಂಡ್ಸ್ ಸಭೆಯಲ್ಲಿ ಪಣಂಬೂರು ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಎಂ.ಫ್ರೆಂಡ್ಸ್ ಸದಸ್ಯರಾಗಿರುವ ಕೆ.ಎಂ. ರಫೀಕ್ ಅವರನ್ನು ಎಂ.ಫ್ರೆಂಡ್ಸ್ ಗೌರವಾಧ್ಯಕ್ಷ ಯು.ಟಿ. ಖಾದರ್ ಸನ್ಮಾನಿಸಿದರು. ಇದೇ ಸಂದರ್ಭ ದೀಪಕ್ ಹತ್ಯೆ, ಬಶೀರ್ ಹತ್ಯೆಯ ಆರೋಪಿಗಳನ್ನು ಬಂಧಿಸಿದ ಪೊಲೀಸರನ್ನು ಅಭಿನಂದಿಸಲಾಯಿತು.

ಎಂ.ಫ್ರೆಂಡ್ಸ್ ಅಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿದರು. ಇರ್ಶಾದ್ ಸುಪ್ರೀಮ್ ಟಿಂಬರ್, ಸುಜಾಹ್ ಮಹಮ್ಮದ್ ಅಲಂಕಾರ್, ಅಬೂಬಕರ್ ನೋಟರಿ, ಡಾ.ಮುಬಶ್ಶಿರ್, ಆರಿಫ್ ಪಡುಬಿದ್ರಿ, ಕೆ.ಪಿ. ಸಾದಿಕ್ ಪುತ್ತೂರು, ಮುಸ್ತಫಾ ಗೋಳ್ತಮಜಲು, ಶಾಕಿರ್ ಹಾಜಿ ಪುತ್ತೂರು, ವಿ.ಎಚ್. ಅಶ್ರಫ್, ಇರ್ಶಾದ್ ತುಂಬೆ, ಆರಿಫ್ ಬೆಳ್ಳಾರೆ, ಸಫ್ವಾನ್ ವಿಟ್ಲ, ಹಮೀದ್ ಗೋಳ್ತಮಜಲು, ಕಲಂದರ್ ಪರ್ತಿಪ್ಪಾಡಿ, ಇರ್ಶಾದ್ ವೇಣೂರು, ಹನೀಫ್ ಕುದ್ದುಪದವು, ಅಬ್ಬಾಸ್ ಕಲ್ಲಂಗಳ ಉಪಸ್ಥಿತರಿದ್ದರು. ರಶೀದ್ ವಿಟ್ಲ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News