ಮನೆಯಲ್ಲಿ ಸಂಭವಿಸಿದ್ದು ಬೆಂಕಿ ಅವಘಡ: ಈ ದಂಪತಿ ಮಾಡಿದ್ದೇನು ನೋಡಿ

Update: 2018-01-14 12:59 GMT

ನಾನ್ನಿಂಗ್, ಜ.14: ಬೆಂಕಿ ಹೊತ್ತಿ ಉರಿಯುತ್ತಿದ್ದ ಮನೆಯೊಂದರಲ್ಲಿ ಸೆಲ್ಫಿ ತೆಗೆದ ಜೋಡಿಯೊಂದರ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗುತ್ತಿದೆ. ಝೋಂಗ್ ಚೆಂಗ್ ಹಾಗು ಆತನ ಗೆಳತಿ ದಕ್ಷಿಣ ಚೀನಾದ ಗುವಾಂಕ್ಸಿ ಝುವಾಂಗ್ ಎಂಬಲ್ಲಿರುವ ಕಟ್ಟಡವೊಂದರಲ್ಲಿ  ವಾಸಿಸುತ್ತಿದ್ದರು. ಇತ್ತೀಚೆಗೆ ಅವರ ಮನೆಯಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿತ್ತು.

“ನಾನು ಆಗ ಬಾತ್ ರೂಂನಲ್ಲಿದ್ದೆ. ಸುಟ್ಟ ವಾಸನೆ ಬಂದದ್ದರಿಂದ ನಾನು ಬಾಗಿಲು ತೆರೆದೆ. ಕೂಡಲೇ ಬಾಗಿಲನ್ನು ತೆರೆದೆ. ಅಲ್ಲಿ ಭಾರೀ ಬೆಂಕಿ ಆವರಿಸಿತ್ತು” ಎಂದು ಝೋಂಗ್ ನೆನಪಿಸುತ್ತಾರೆ.

ಕೂಡಲೇ ಝೋಂಗ್ ಗೆಳತಿಯನ್ನು ಎಚ್ಚರಿಸಿದ್ದು ಈ ಇಬ್ಬರು ನೆರೆಮನೆಯವರ ಜೊತೆ ಸೇರಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿ ಅವಘಡದ ಪರಿಣಾಮ ಹಲವು ವಸ್ತುಗಳು ಸುಟ್ಟು ಕರಕಲಾಗಿದ್ದು, ಕೆಲವು ಮುರಿದುಬೀಳುವ ಸ್ಥಿತಿಯಲ್ಲಿತ್ತು. ಆದರೆ ಮನೆಯಿಂದ ಹೊರಹೋಗುವ ಬದಲು ಈ ದಂಪತಿ ಸುಟ್ಟುಕರಕಲಾದ ಅವಶೇಷಗಳ ನಡುವೆ ಸೆಲ್ಫಿ ತೆಗೆಯಲು ಆರಂಭಿಸಿದ್ದಾರೆ.

ಅಲ್ಲದೆ ಈ ಜೋಡಿ ಬೆಂಕಿ ಅವಘಡ ಸಂಭವಿಸಿದ ಮನೆಯಲ್ಲಿ ವಿಡಿಯೋ ಮಾಡಿದ್ದಾರೆ. ಸದ್ಯ ಇಂಟರ್ ನೆಟ್ ನಲ್ಲಿ ಇವರಿಬ್ಬರ ಫೋಟೊ ವೈರಲ್ ಆಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News