ವಿಟ್ಟ: ಯೂತ್ ಕಾಂಗ್ರೆಸ್, ಚೊಯ್ಸ್ ಗೈಸ್ ಆಶ್ರಯದಲ್ಲಿ ಕಬಡ್ಡಿ ಪಂದ್ಯಾಟ
ಬಂಟ್ವಾಳ, ಜ. 14: ಇಡ್ಕಿಡು-ಕೋಲ್ಪೆಯ ಯೂತ್ ಕಾಂಗ್ರೆಸ್ ಹಾಗೂ ಚೊಯ್ಸ್ ಗೈಸ್ ಆಶ್ರಯದಲ್ಲಿ 58 ಕೆ.ಜಿ ವಿಭಾಗದ ಕಬಡ್ಡಿ ಪಂದ್ಯಾಟ ವಿಟ್ಟದಲ್ಲಿ ನಡೆಯಿತು.
ಇಡ್ಕಿಡು ಬೂತ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಹಕೀಂ ಕೋಲ್ಪೆ ಅವರು ಪಂದ್ಯಾಟವನ್ನು ಉದ್ಘಾಟಿಸಿದರು. ಉದ್ಯಮಿ ಹಮೀದ್ ಕನ್ಯಾನ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ನಾಸೀರ್ ಕೋಲ್ಪೆ, ಶಾಕೀರ್ ಅಳಕೆ ಮಜಲು, ಕೆ.ಎಸ್. ಹಮೀದ್ ಕಂಬಳಬೆಟ್ಟು, ಅಶ್ರಫ್ ಹಾಜಿ, ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಹನೀಫ್ ಬಗ್ಗುಮೂಲೆ, ಕಬಕ ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷ ಲತೀಫ್ ದಲ್ಕಾಜೆ, ಕುಳ ಬೂತ್ ಕಾಂಗ್ರೆಸ್ ಅಧ್ಯಕ್ಷ ಅಶ್ರಫ್ ಕೆ.ಜಿ.ಎನ್., ವಿಟ್ಲ ಮುಡ್ನೂರು ಗ್ರಾಪಂ ಸದಸ್ಯ ಅಬ್ದುರ್ರಹ್ಮಾನ್ ಅದ್ರು, ಖಂದರ್, ಅಯ್ಯೂಬ್, ಸಿನಾನ್, ಶೈಲೇಶ್, ಪತ್ರಕರ್ತ ಲತೀಫ್ ನೇರಳಕಟ್ಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನಿಸಾರ್, ಅಜ್ನಾಸ್, ಅಬ್ದುಲ್ಲ ಕುಂಞಿ, ನಿಯಾರ್, ಉಮರ್ ಕುಂಞಿ ಉಪಸ್ಥಿತರಿದ್ದರು. ಪುರುಷೋತ್ತಮ ಕೋಲ್ಪೆ, ಕರೀಂ ಮೂಸಾ, ರವಿ ಅಂಚನ್, ಬಶೀರ್ ಬೋಳಂತೂರು ತೀರ್ಪುಗಾರರಾಗಿ ಸಹಕರಿಸಿದರು. ಪಂದ್ಯಾಟದಲ್ಲಿ ಕಂಬಳಬೆಟ್ಟುವಿನ ಸೌಹಾರ್ದ ಫ್ರೆಂಡ್ಸ್‌ನ ಎ ಮತ್ತು ಬಿ ತಂಡಗಳು ಕ್ರಮವಾಗಿ ಪ್ರಥಮ, ದ್ವಿತೀಯ ಸ್ಥಾನಪಡೆದುಕೊಂಡಿತು. ಉರಿಮಜಲು ಗೆಳೆಯರ ಬಳಗ ತೃತೀಯ, ಮುಡಿಪು ಎಚ್‌ಎಸ್‌ಸಿ ತಂಡ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು. ಅಝರ್, ಫಾರೂಕ್, ಮಣಿ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು. ಕೋಲ್ಪೆ ಯೂತ್ ಕಾಂಗ್ರೆಸ್ ಅಧ್ಯಕ್ಷ ರಿಯಾರ್ ಸ್ವಾಗತಿಸಿ, ಅಬೂಬಕರ್ ವಂದಿಸಿದರು.