×
Ad

ರೈಲ್ವೆ ನಿಲ್ದಾಣಗಳಲ್ಲಿ ಇನ್ನು ಮುಂದೆ ದುಬಾರಿಯಾಗಲಿದೆ ಈ ಸೇವೆಗಳು…

Update: 2018-01-14 20:58 IST

ಹೊಸದಿಲ್ಲಿ, ಜ. 14: ರೈಲ್ವೆ ಕ್ಲಾಕ್ ರೂಮ್ ಹಾಗೂ ಲಾಕರ್‌ಗಳಲ್ಲಿ ತಮ್ಮ ಸಾಮಗ್ರಿಗಳನ್ನು ಇರಿಸುವವರು ಪ್ರಯಾಣಿಕರು ಇನ್ನು ಮುಂದೆ ಹೆಚ್ಚು ಶುಲ್ಕ ಪಾವತಿಸಬೇಕಿದೆ. ರೈಲು ನಿಲ್ದಾಣಗಳಲ್ಲಿ ಈ ಸೇವೆಗಳಿಗೆ ಶುಲ್ಕ ಹೆಚ್ಚಿಸಲು ರೈಲ್ವೆ ಮಂಡಳಿ ವಿಭಾಗೀಯ ರೈಲ್ವೆ ಮ್ಯಾನೇಜರ್‌ಗೆ ಅಧಿಕಾರ ನೀಡಿದೆ.

 ಕಂಪ್ಯೂಟರೀಕೃತ ದಾಸ್ತಾನು ಸೇರಿದಂತೆ ಸೇವೆಗಳ ಆಧುನಿಕೀಕರಣ ಹಾಗೂ ವಾರ್ಷಿಕ ದರ ಏರಿಕೆಗೆ ಅವಕಾಶ ನೀಡಲು ಇದು ಶೀಘ್ರದಲ್ಲಿ ಹರಾಜು ವ್ಯವಸ್ಥೆ ಆರಂಭಿಸಲಿದೆ.

 ರೈಲ್ವೆ ಪ್ರಸ್ತುತ 24 ಗಂಟೆಗಳ ಕಾಲ ಲಾಕರ್ ಬಳಸಲು 20 ರೂ. ಶುಲ್ಕ, ಪ್ರತಿ ಹೆಚ್ಚುವರಿ 30 ಗಂಟೆಗಳಿಗೆ 30 ರೂ. ಶುಲ್ಕ ವಿಧಿಸುತ್ತದೆ. ಈ ಹಿಂದೆ ಶುಲ್ಕ 15 ರೂ. ಇತ್ತು. ಕ್ಲಾಕ್ ರೂಮ್ ಬಾಡಿಗೆ 24 ಗಂಟೆಗಳಿಗೆ 15 ರೂ. ಶುಲ್ಕ ವಿಧಿಸಲಾಗುತ್ತದೆ. 2000ದಲ್ಲಿ ಇದಕ್ಕೆ 7 ರೂ. ಹಾಗೂ ಹೆಚ್ಚುವರಿ 24 ಗಂಟೆಗಳಿಗೆ 20 ರೂ. ಇತ್ತು. ಈ ಹಿಂದೆ ಶುಲ್ಕ 10 ರೂ. ಇತ್ತು.

2000ರ ವರೆಗೆ ಲಾಕರ್ ಹಾಗೂ ಕ್ಲಾಕ್ ರೂಮ್ 24 ಗಂಟೆ ಬಳಕೆಗೆ ಕ್ರಮವಾಗಿ 10 ರೂ. ಹಾಗೂ 15 ರೂ. ಇತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News