×
Ad

ಭಟ್ಕಳ ತಾಲೂಕು ಸರ್ಕಾರಿ ನೌಕರರ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

Update: 2018-01-14 21:06 IST

ಭಟ್ಕಳ, ಜ. 14:  ತಾಲೂಕಿನ ಸರ್ಕಾರಿ ನೌಕರರ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಜಾಲಿ ರಸ್ತೆಯ ಕೋಲಾ ಮೈದಾನದಲ್ಲಿ ರವಿವಾರ ನಡೆಯಿತು.

ಪಂದ್ಯಾವಳಿ ಉದ್ಘಾಟಿಸಿ, ಮಾತನಾಡಿದ ಬಿಜೆಪಿ ಯುವ ಮುಖಂಡ ಸುನೀಲ್ ನಾಯ್ಕ, ಸರ್ಕಾರಿ ನೌಕರರು ತಮ್ಮ ಕೆಲಸಗಳಲ್ಲಿ ಒತ್ತಡವನ್ನು ಎದುರಿಸುತ್ತಿದ್ದು ಇಂತಹ ಕ್ರೀಡೆಗಳನ್ನು ಆಯೋಜಿಸುವುದರಿಂದ ಒತ್ತಡದಿಂದ ಹೊರಬರಲು ಸಾಧ್ಯವಾಗುತ್ತದೆ,  ಯುವ ಪೀಳಿಗೆಗೆ ಹಾಗೆ ಮುಂದಿನ‌ ಭವಿಷ್ಯದ ದೃಷ್ಟಿಯಿಂದ ನೌಕರರ ಮಾರ್ಗದರ್ಶನ ಅಮೂಲ್ಯವಾದುದು, ಮುಂದಿನ ದಿನಗಳಲ್ಲಿ ಸಮಾಜದ ಒಳಿತಿಗೆ ಬಹುಮುಖ್ಯ ಪಾತ್ರ ವಹಿಸುವ ನೌಕರರು ಕ್ರೀಡೆಗಳ ಜೊತೆಗೆ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಇನ್ನಿತರ ಸಮಾಜ ಮುಖಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರಬೇಕೆಂದು ಹೇಳಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ತಹಶೀಲ್ದಾರ್ ವಿ.ಎನ್.ಬಾಡ್ಕರ್ ವಹಿಸಿದ್ದರು.

ಈ ಸಂದರ್ಭದಲ್ಲಿ ವೆಂಕಟೇಶ ನಾಯ್ಕ, ಮೋಹನ ನಾಯ್ಕ, ವಾಸು ಮೋಗೆರ, ಶೇಕರ್ ಪೂಜಾರಿ, ವಿನಾಯಕ ಥಾಮ್ಸನ್, ರಾಮ ಪೂಜಾರಿ ಮುಂತಾದವರು ಉಪಸ್ಥಿತಿದ್ದರು. ಸಿ.ಡಿ. ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು, ಗಣೇಶ ಹೆಗಡೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News