ಗಂಗೊಳ್ಳಿ: ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೃತ್ಯು
Update: 2018-01-14 23:06 IST
ಗಂಗೊಳ್ಳಿ, ಜ.14: ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಜ.12ರಂದು ಮಧ್ಯರಾತ್ರಿ ವೇಳೆ ನಡೆದಿದೆ.
ಮೃತರನ್ನು ಕನ್ನೇಶ್ವರ ಎಂದು ಗುರುತಿಸಲಾಗಿದೆ. 12 ಮಂದಿ ಮೀನುಗಾರರು ಬೋಟಿನಲ್ಲಿ ಮರವಂತೆಯಿಂದ ಸುಮಾರು 5ಕಿ.ಮೀ. ದೂರದ ಸಮುದ್ರದಲ್ಲಿ ಮೀನು ಹಿಡಿಯುತ್ತಿದ್ದು, ಈ ವೇಳೆ ಬಲೆ ಎಳೆಯುತ್ತಿದ್ದ ಕನ್ನೇಶ್ವರಗೆ ಹಾವೊಂದು ಕಚ್ಚಿತ್ತೆನ್ನಲಾಗಿದೆ. ಆಗ ಅವರು ಆಯ ತಪ್ಪಿಸಮುದ್ರಕ್ಕೆ ಬಿದ್ದು ತೀವ್ರವಾಗಿ ಅಸ್ವಸ್ಥ ಗೊಂಡರು. ಇತರರು ಕೂಡಲೇ ಅವರನ್ನು ಮೇಲಕ್ಕೆತ್ತಿ ದಡಕ್ಕೆ ತಂದಿದ್ದು, ಕುಂದಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅವರು ಮೃತಪಟ್ಟರು. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.