ಅಂದರ್ ಬಾಹರ್: ಮೂವರ ಸೆರೆ
Update: 2018-01-14 23:09 IST
ಕುಂದಾಪುರ, ಜ.14: ಕೋಡಿ ತಲೆಯ ನಾಗಜಟ್ಟಿಗೇಶ್ವರ ದೇವಸ್ಥಾನದ ಹಿಂಬದಿಯಲ್ಲಿ ಜ.14ರಂದು ಬೆಳಗ್ಗೆ ಅಂದರ್‌ಬಾಹರ್ ಜುಗಾರಿ ಆಡುತ್ತಿದ್ದ ಮದ್ದುಗುಡ್ಡೆಯ ಸುಧಾಕರ ಖಾರ್ವಿ(40), ಕೋಡಿಯ ಹರೀಶ್ ಕಾರ್ವಿ (60), ಮಾಧವ ಮೊಗವೀರ(41) ಎಂಬವರನ್ನು ಬಂಧಿಸಲಾಗಿದೆ.
ಸುರೇಶ ಕೋಡಿ, ಕೃಷ್ಣ ಹಳವಳ್ಳಿ, ನಾರಾಯಣ ಎಂಕೋಡಿ, ಗಣೇಶ ಜಡ್ಡಿಮನೆ, ಶೇಖರ ಶೇರೆಗಾರ್ ಎಂಬವರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಿಂದ 3,420 ರೂ. ನಗದು ವಶ ಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.