ಜ.15ರಂದು ಆದಿಉಡುಪಿಯಲ್ಲಿ ಸೌಹಾರ್ದ ಪರಂಪರೆ ಕಾಪಾಡಲು ಸಮಾವೇಶ
Update: 2018-01-14 23:26 IST
ಉಡುಪಿ, ಜ.14: ಸೌಹಾರ್ದತೆಗಾಗಿ ಕರ್ನಾಟಕ ಉಡುಪಿ ಜಿಲ್ಲಾ ಸಂಘ ಟನಾ ಸಮಿತಿಯ ವತಿಯಿಂದ ಕರಾವಳಿ ಜಿಲ್ಲೆಯ ಸೌಹಾರ್ದ ಪರಂಪರೆಯನ್ನು ಎತ್ತಿ ಹಿಡಿಯುವ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಸಮಾವೇಶವನ್ನು ಜ.15ರಂದು ಮಧ್ಯಾಹ್ನ 3ಗಂಟೆಗೆ ಆದಿಉಡುಪಿಯ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ.
ಸಮಾವೇಶವನ್ನು ನಿವೃತ್ತ ಪ್ರಾಧ್ಯಾಪಕ ಹಾಗೂ ಅಂಕಣಕಾರ ಭಾಸ್ಕರ್ ರಾವ್ ಉದ್ಘಾಟಿಸಲಿರುವರು. ಮುಖ್ಯ ಅತಿಥಿಯಾಗಿ ಸಾಹಿತಿ ಚಂದ್ರಕಲಾ ನಂದಾವರ ಭಾಗವಹಿಸಲಿರುವರು. ಕವಯತ್ರಿ ಜ್ಯೋತಿ ಗುರುಪ್ರಸಾದ್ ಸೌಹಾರ್ದ ಕವನ ವಾಚನ ಮಾಡಲಿರುವರು ಎಂದು ಸಂಚಾಲಕ ಜಿ.ರಾಜಶೇಖರ್ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.