ಉಡುಪಿ ಜಿಲ್ಲಾ ಮಟ್ಟದ ಮದ್ರಸ ಸಮ್ಮೇಳನ
Update: 2018-01-14 23:28 IST
ಕಾಪು, ಜ.14: ಸುನ್ನೀ ಜಂಯಿಯ್ಯತುಲ್ ಮುಅಲ್ಲಿಮೀನ್ ವತಿಯಿಂದ ಉಡುಪಿ ಜಿಲ್ಲಾ ಮಟ್ಟದ ಮದ್ರಸ ಸಮ್ಮೇಳನವನ್ನು ಇತ್ತೀಚೆಗೆ ಕಾಪು ಜೆಸಿಐ ಸಭಾ ಭವನದಲ್ಲಿ ಆಯೋಜಿಸಲಾಗಿತ್ತು.
ಸಮ್ಮೇಳನವನ್ನು ಅಬ್ದುರ್ರಶೀದ್ ಸಖಾಫಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಎಸ್‌ಜೆಎಂ ಜಿಲ್ಲಾಧ್ಯಕ್ಷ ಅಬ್ದುರ್ರಝಾಕ್ ಖಾಸಿಮಿ ವಹಿಸಿದ್ದರು. ಕಾಪು ಉಸ್ತಾದ್ ದುವಾ ನೆರವೇರಿಸಿದರು.
‘ಧರ್ಮ ಅಳಿಯದೆ ಜಗತ್ತು ಉಳಿಯಲಿ’ ಎಂಬ ವಿಷಯದ ಕುರಿತು ಕನ್ನಂಗಾರ್ ಮುದರ್ರಿಸ್ ಅಶ್ರಫ್ ಸಖಾಫಿ ವಿಚಾರ ಮಂಡಿಸಿದರು. ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ನಈಮಿ ಮೂಳೂರು ಸ್ವಾಗತಿಸಿ ಕಾರ್ಯ ಕ್ರಮ ನಿರೂಪಿಸಿದರು. ಹನೀಫ್ ಸಹದಿ ನಾವುಂದ ವಂದಿಸಿದರು.