×
Ad

ಹೆಬಳೆ ಪಂಚಾಯತ್ ವ್ಯಾಪ್ತಿ ಅಭಿವೃದ್ಧಿಗೆ 150 ಕೋಟಿ ರೂ. ಅನುದಾನ ಮಂಜೂರಿ-ಮಾಂಕಾಳ್

Update: 2018-01-14 23:46 IST

ಭಟ್ಕಳ, ಜ. 14: ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ಅಭಿವೃದ್ಧಿಗಾಗಿ ಸರ್ಕಾರಿಂದ ಸುಮಾರು 150 ಕೋ. ರೂ. ಅನುದಾನ ಮಂಜೂರಿಯಾಗಿದೆ ಎಂದು ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಮಾಂಕಾಳ್ ಎಸ್.ವೈದ್ಯ ಹೇಳಿದರು.

ಅವರು ರವಿವಾರ ಹೆಬಳೆ ಗ್ರಾ.ಪಂ. ವ್ಯಾಪ್ತಿಯ ತಂಗಿನಗುಂಡಿ ತಿಲಕ ಯುವಕ ಮಂಡಳ ಹಾಗೂ ಸಿಂಚನ ಯುವತಿ ಮಂಡಳದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸುಮಾರು 150 ಕೋಟಿ ರೂಪಾಯಿಯನ್ನು ಮಂಜೂರಿ ಮಾಡಿದ್ದೇನೆ. ಅದರಲ್ಲಿ 90% ತೆಂಗಿನಗುಂಡಿಗೆ ಪ್ರದೇಶಕ್ಕೆ ಬಳಕೆಯಾಗಿದೆ. ಇದಕ್ಕೆ ಕಾರಣ ಈ ಊರಿನ ಮುಖಂಡರು ಯುವಕರು ನನಗೆ ಒತ್ತಡ ತಂದು ಕೆಲಸ ಮಾಡಿಸಿಕೊಂಡಿದ್ದಾರೆ. ಇಷ್ಟೆಲ್ಲ ಕೆಲಸ ಆಗಲು ಊರಿನ ಮುಖಂಡರ ಹಾಗೂ ಯುಕರ ಪರಿಶ್ರಮವೇ ಕಾರಣ ಎಂದ ಇಲ್ಲಿನ ಯುವಕರು ಕ್ರಿಯಾಶೀಲರಾಗಿದ್ದು, ಸಮಾಜ ಹಾಗೂ ಗ್ರಾಮಕ್ಕೆ ಅವರಿಂದ ಸಾಕಷ್ಟು ಪ್ರಯೋಜನಗಳು ಆಗಲಿದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷ್ಷೆಜಯಶ್ರೀ ಮೊಗೇರ ಮಾತನಾಡಿ ನನ್ನ ಕ್ಷೇತ್ರದಲ್ಲಿ ಎಷ್ಟು ಕೆಲಸ ಮಾಡಲು ಸಾಧ್ಯವೋ ಅಷ್ಟು ನಾನು ಮಾಡಿದ್ದೇನೆ. ಶಾಸಕರು ಕೂಡ ನಮಗೆ ಸಹಕಾರ ಮಾಡಿದ್ದಾರೆ. ಇಲ್ಲಿನ ಪ್ರೌಢ ಶಾಲೆಗೆ ಜಾಗ ಕೂಡ ಮಂಜೂರಿ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಊರಿನ ಯುವಕ ಮಂಡಳದ ವತಿಯಿಂದ ಶಾಸಕ ಮಂಕಾಳ ವೈದ್ಯ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ ಅವರನ್ನು ಸನ್ಮಾನಿಸಲಾಯಿತು. 

ಹೆಬಳೆ ಪಂಚಾಯತ್ ಅಧ್ಯಕ್ಷ ಎನ್.ಡಿ.ಮೋಗೇರ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಿಠಲ್ ನಾಯ್ಕಾ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News