×
Ad

ಅಜ್ಜರಕಾಡು ಪಾರ್ಕಿನ ಮರಗಳ ಬುಡದಲ್ಲಿ ತ್ಯಾಜ್ಯಗಳಿಗೆ ಬೆಂಕಿ

Update: 2018-01-15 17:06 IST

ಉಡುಪಿ, ಜ.15: ಅಜ್ಜರಕಾಡು ಭುಜಂಗ ಪಾರ್ಕಿನ ಪರಿಸರದಲ್ಲಿ ಪರಿಸರ ತಂಪಾಗಿಸುವ ಮರಗಳಿಗೆ ಅಗ್ನಿ ಶಾಖದ ಹಿಂಸೆ ನೀಡುತ್ತಿರುವ ಕೃತ್ಯಕ್ಕೆ ಪರಿಸರ ಪ್ರೇಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಹಿರಿಯ ನಾಗರಿಕರ ಪಾರ್ಕಿನ ಬಳಿ ಅರಣ್ಯ ಇಲಾಖೆ 2015ರಲ್ಲಿ ‘ಗಿಡ ಮರ ವನ- ನಮ್ಮೂರ ದೇವರು’ ಅಭಿಯಾನದ ಮೂಲಕ ಪರಿಸರ ಹಸಿರಾಗಿಸುವ ಉದ್ದೇಶದಿಂದ ಆಯಾಕಟ್ಟಿನ ಸ್ಥಳಗಳನ್ನು ಗುರುತಿಸಿ ಗಿಡ ನಾಟಿ ಮಾಡಿತ್ತು. ಇಲ್ಲಿನ ಮರ ಗಿಡಗಳ ಬುಡದಲ್ಲಿ ಸ್ವಚ್ಛತೆ ಮಾಡುವ ಸಿಬ್ಭಂದಿಗಳು ಕಸ, ಪ್ಲಾಸ್ಟಿಕ್ ಮರದ ದರಗಲೆ, ಇತರ ತ್ಯಾಜ್ಯಗಳನ್ನು ಸಂಗ್ರಹಿಸುತ್ತಿದ್ದು, ತ್ಯಾಜ್ಯ ನಾಶಗೊಳಿ ಸಲು ಬೆಂಕಿ ಹಾಕುತ್ತಿರುವುದು ಕಂಡು ಬಂದಿದೆ. ಬೆಂಕಿಯ ಶಾಖದ ಹಿಂಸೆಗೆ ಮರಗಿಡಗಳ ಎಲೆಗಳು ಬಾಡುತ್ತಿದ್ದು, ತೊಗಟೆಗಳು ಸುಡುತ್ತಿವೆ.

ಆದುದರಿಂದ ನಗರಸಭೆ ಕೂಡಲೇ ಇಲ್ಲಿಯ ಮರಗಿಡಗಳ ರಕ್ಷಣಾ ಕಾರ್ಯ ನಡೆಸಬೇಕು. ಪಾರ್ಕ್ ಸ್ವಚ್ಚಗೊಳಿಸುವ ಸಿಬ್ಭಂದಿಗಳಿಗೆ ಹಾಗೂ ಕೆಲಸದ ಮೆಲ್ವೀಚಾರಕರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ, ಆಲ್ವೀನ್ ಡಿಸೋಜ ಆಗ್ರಹಿಸಿದ್ದಾರೆ.

ಅಜ್ಜರಕಾಡು ಉದ್ಯಾನವನದಲ್ಲಿ ಶುದ್ದಗಾಳಿಯ ಸೇವೆನೆಯ ಉದ್ದೇಶದಿಂದ ನಿಸರ್ಗ ಪ್ರಿಯರು, ವಾಯು ವಿಹಾರಿಗಳು, ಚಿಕ್ಕ ಮಕ್ಕಳು ಬರುತ್ತಿದ್ದು, ಇಲ್ಲಿ ಕಸ ತ್ಯಾಜ್ಯಗಳಿಗೆ ಬೆಂಕಿ ನೀಡುವುದರ ಪರಿಣಾಮ ಎದ್ದೇಳುವ ಹೊಗೆಯಿಂದ ಶುದ್ಧ ಪರಿಸರದ ವಾತಾವರಣ ಕಲುಷಿತಗೊಳ್ಳುತ್ತಿದೆ. ರಾಸಾಯನಿಕ ತ್ಯಾಜ್ಯಗಳ ಹೊಗೆಯಿಂದ ಕಾಯಿಲೆಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಇದೀಗ ಪರಿಸರ ಪ್ರೇಮಿಗಳ ಮಾಹಿತಿ ಮೆರೆಗೆ ದಹಿಸಲ್ಪಟ್ಟ ಗಿಡಗಳ ಬುಡಕ್ಕೆ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ, ಆಲ್ವೀನ್, ರೀಕ್ಷಾ ಚಾಲಕರು ಸೇರಿಕೊಂಡು ನೀುಣಿಸುವ ಕಾರ್ಯ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News