×
Ad

ಪುತ್ತೂರು: ವಿವಾಹ ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ

Update: 2018-01-15 20:51 IST

ಪುತ್ತೂರು,ಜ.15: ವಿವಾಹ ನಿಶ್ಚಿತಾರ್ಥವಾಗಿದ್ದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಬಲ್ನಾಡು ಉಜ್ರುಪಾದೆ ಎಂಬಲ್ಲಿ  ರವಿವಾರ ರಾತ್ರಿ ನಡೆದಿದೆ. 

ಇಲ್ಲಿನ ಮಾರ್ಷೆಲ್ ಡಿಸೋಜ ಎಂಬವರ ಪುತ್ರ ದಿಯೋಗ್ ಡಿಸೋಜ (39) ಆತ್ಮಹತ್ಯೆ ಮಾಡಿಕೊಂಡವರು. ಇವರಿಗೆ ಮುಂದಿನ ಫೆಬ್ರವರಿ ತಿಂಗಳಲ್ಲಿ ವಿವಾಹ ನಡೆಯಬೇಕಿತ್ತು. ಹೊಸ ಮನೆಯನ್ನು ಕಟ್ಟುತ್ತಿದ್ದು ಕೊನೆಯ ಹಂತದಲ್ಲಿದೆ. ಇವರ ಮೃತದೇಹ ಮನೆ ಸಮೀಪದ ಗುಡ್ಡದ ಮರದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಪತ್ತೆಯಾಗಿದೆ. ಮೃತರ ಜೇಬಿನಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು ನಾನು ಸಾಲ ಪಡೆದುಕೊಂಡಿದ್ದು ಅದನ್ನು ಪಾವತಿ ಮಾಡಲು ಸಾಧ್ಯವಿಲ್ಲದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಬರೆಯಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News